ಮೈಸೂರಿನಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ : ಲಕ್ಷಾಂತರ ಜನ ಭಾಗಿ

Team Newsnap
1 Min Read

ಮೈಸೂರು: ಮೈಸೂರಿನ ಐತಿಹಾಸಿಕ ಭವ್ಯ ಪರಂಪರೆ ಸಾರುವ ಜಂಬೂ ಸವಾರಿಗೆ ( ಅಂಬಾರಿ ಮೆರವಣಿಗೆಗೆ) ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

image 2

ಸಿಎಂ ಸಿದ್ಧರಾಮಯ್ಯಗೆ  ಡಿಸಿಎಂ ಡಿಕೆ ಶಿವಕುಮಾರ್, ರಾಜವಂಶಸ್ಥ ಯದುವೀರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ  ಸಾಥ್ ನೀಡಿದರು.

image 4

ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದೆ. ಸತತ 4ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು, ಜಂಬೂ ಸವಾರಿ ಮೆರವಣಿಗೆ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್‌, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ.

image 3

ಇದನ್ನು ಓದಿ – ದಸರಾ ಜಂಬೂ ಸವಾರಿಗೆ ಮೆರಗು : 49 ವಿಶೇಷ ಸ್ತಬ್ಧ ಚಿತ್ರಗಳು 

ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ ಲಕ್ಷಾಂತರ ಜನರು ದಸರಾ ಜಂಬೂಸವಾರಿ ವೀಕ್ಷಣೆಯಲ್ಲಿ ಸಾಕ್ಷಿಯಾಗಿ ತಾಯಿಗೆ ಭಕ್ತಿ ಭಾವದ ನಮನ ಸಲ್ಲಿಸಿದರು .

Share This Article
Leave a comment