ಕರ್ನಾಟಕದಾದ್ಯಂತ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ಕುರಿತಂತೆ ರೈತ ನಾಯಕರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆ ಅಹ್ವಾನ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಂದ್‌ಗೆ ನಮ್ಮ ಬೆಂ ಬಲವಿಲ್ಲ ಎಂದು ನೇರವಾಗಿಯೇ ಹೇಳಿದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಕೃಷಿ ಮಸೂದೆ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
‘ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿಯಿಂದ ಯಾವುದೇ ರೈತರಿಗೆ ತೊಂದರೆಯಾಗುವದಿಲ್ಲ. ಈ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ರೈತರನ್ನು ಗೊಂದಲಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವದಿಲ್ಲ. ಆದರೆ ಮೊದಲು ಇದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಯಾವುದೇ ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಮೊದಲು ಎಪಿಎಂಸಿಯ ಹೊರಗಡೆ ರೈತ ತನ್ನ ಬೆಳೆ ಮಾರಾಟ ಮಾಡಿದ್ದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಆ ನಿರ್ಬಂಧ ತೆಗೆದುಹಾಕಲಾಗಿದೆ. ಅಲ್ಲದೇ ಯಾವುದೇ ನೀರಾವರಿ ಭೂಮಿಯನ್ನು ಸಾಗುವಳಿ ಉದ್ದೇಶದ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕೈಗಾರಿಕೆಗಳು ರಾಜ್ಯದಲ್ಲಿ ಉದ್ಯೋಗ ಸೃಷ್ಠಿಗೆ ಸಹಾಯಕವಾಗಲಿವೆ. ಆದರೆ ಯಾವುದೇ ಸಾಗುವಳಿ ಭೂಮಿಯಲ್ಲಿ ಕೈಗಾರಿಕೆಗಳ ನಿರ್ಮಾಣ ಮಾಡುವದಿಲ್ಲ. ಕೃಷಿಗೆ ಸಹಾಯಕವಾಗದ ಭೂಮಿಯಲ್ಲಿ ಮಾತ್ರ ಕೈಗಾರಿಕೆಗಳ ನಿರ್ಮಾಣ ಮಾಡಲಾಗುತ್ತದೆ. ಒಂದು ಕುಟುಂಬ ಕೇವಲ 54 ಎಕರೆ ಭೂಮಿ ಹೊಂದಲು ಅವಕಾಶವಿದೆ. ಅದಕ್ಕಿಂತಲೂ ಹೆಚ್ಚಿನ ಭೂಮಿ ಹೊಂದುವ ಹಾಗಿಲ್ಲ. ಅಲ್ಲದೇ ರಾಜ್ಯದಲ್ಲಿ ಈಗಾಗಲೇ 22 ಲಕ್ಷ ಕೃಷಿ ಭೂಮಿ ಸಾಗುವಳಿ ಮಾಡದೇ ಬಂಜರಾಗಿದೆ. ಯಾರು ಬೇಕಾದರೂ ಅಂತಹ ಭೂಮಿಯಲ್ಲಿ ಸಾಗುವಳಿ ಮಾಡಬಹುದು. ಸರ್ಕಾರ ಅದಕ್ಕೆ ಸಹಾಯ ಮಾಡಲಿದೆ’ ಎಂದರು.
‘ಹಾಗೆಯೇ ಪರಿಶಿಷ್ಟ ಜಾತಿ, ಪಂಗಡದವರ ಭೂಮಿಯನ್ನು ಯಾರೂ ಖರೀದಿಸುವಂತಿಲ್ಲ. ನಾನು ರೈತರ ಬೆಂಬಲದಿಂದ ಮುಖ್ಯಮಂತ್ರಿ ಹುದ್ದೆಗೆ ಬಂದವನು. ಅವರಿಗೆ ಅನ್ಯಾಯವಾಗಲು ಬಿಡುವದಿಲ್ಲ. ರೈತ ಸಂಘಟನೆಗಳಿಗೆ ನನ್ನೊಡನೆ ಚರ್ಚೆಗೆ ಆಹ್ವಾನವಿದೆ. ಯಾರೂ ರೈತರನ್ನು ಗೊಂದಲಕ್ಕೆ ದೂಡಬೇಡಿ’ ಎಂದಿದ್ದಾರೆ.
More Stories
2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರ ಪಟ್ಟಿ ಇಲ್ಲಿದೆ
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಜಿ ಟಿ ದೇವೇಗೌಡನಿಗೆ ಕೊಕ್
ಮುಂದಿನ ಐದು ದಿನ ರಾಜ್ಯದ ಹಲವಡೆ ಭಾರಿ ಮಳೆ ಸಂಭವ