ಸಿಎಂ‌ ಯಾರು ಅಂತ ನಿರ್ಧಾರವೇ ಇಲ್ಲ : ನಾಳೆ ಪದಗ್ರಹಣಕ್ಕೆ ರಾಜಭವನದಲ್ಲಿ ಸಿದ್ದತೆ

Team Newsnap
1 Min Read

ಹೊಸ ಸಿಎಂ ಆಯ್ಕೆ ತ್ವರಿತಗತಿಯಲ್ಲಿ ಸಾಗಿದೆ. ‌ನೂತನ ಸಿಎಂ ಆಯ್ಕೆಗೆ ಈ ಸಂಜೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಇತ್ತ ರಾಜಭನದಲ್ಲಿ ಮಾತ್ರ ನಾಳೆಯೇ ನೂತನ‌ ಸಿ‌ಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದು ಗೊತ್ತಾಗಿದೆ. ‌

ನಾಳೆಯೇ (ಜು.28) ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ ನಿಚ್ಚಳವಾಗಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿಗೆ ಸೂಚನೆ ರವಾನೆಯಾಗಿದೆ. ಆದರೆ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ಐವರು ಸಿಎಂ ರೇಸ್ ನಲ್ಲಿ :

ಈ ಮಧ್ಯೆ 5-6 ನಾಯಕರ ಹೆಸರು ಕೇಳಿಬಂದಿದ್ದು, ಈ ಪೈಕಿ ಅರವಿಂದ್ ಬೆಲ್ಲದ್ ಹೆಸರು ಮುಚೂಣೆಯಲ್ಲಿ ಕೇಳಿಬರುತ್ತಿದೆ.
ಆದರೆ, ಸಿಎಂ ಆಗ್ತಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆಗಲೇ ಸಿಎಂ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ.

ಇಂದು (ಜು.27) ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಿರ್ಧಾರದ ಮೇಲೆ ಅಂತಿಮ‌ ತೀರ್ಮಾನ ವಾಗುವ ಎಲ್ಲಾ ಸಾಧ್ಯತೆಗಳಿವೆ.
ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಂತರ ಹೈಕಮಾಂಡ್ ಘೋಷಣೆ ಮಾಡುವ ಸಾದ್ಯತೆಗಳಿವೆ.

ಒಂದು ವೇಳೆ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ಬಗ್ಗೆ ಕೊಂಚ ಏನಾದ್ರೂ ವಿರೋಧ ವ್ಯಕ್ತವಾದ್ರೆ, ವೀಕ್ಷಕರ ತಂಡ ಅದನ್ನ ಅಮಿತ್ ಶಾ, ನಡ್ಡಾ ಹಾಗೂ ಮೋದಿಗೆ ವರದಿ ನೀಡಲಿದೆ. ಬಳಿಕ ದೆಹಲಿಯಿಂದಲೇ ನಡ್ಡಾ ಅವರು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಬಹುದು.

Share This Article
Leave a comment