CM ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿ; ಇಬ್ಬರ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು

Team Newsnap
1 Min Read

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಾಹನದ ಹಿಂದೆ ಇದ್ದ ಎಸ್ಕಾರ್ಟ್ ವಾಹನ ಪಲ್ಟಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದಿದೆ.

ವಾಣಿ ವಿಲಾಸ ಡ್ಯಾಂನಿಂದ ಹಿರಿಯೂರು ಪಟ್ಟಣದ ನೆಹರು ಮೈದಾನಕ್ಕೆ ಬರುವ ವೇಳೆ ಬೈಕ್ ಒಂದು ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ.ಕೋಲಾರದಿಂದ ಬೇರೆ ಜಿಲ್ಲೆಗೆ ಹೆಣ್ಣು ಕೊಡುವುದನ್ನು ನಿಷೇಧ ಮಾಡಿ : ರೈತ ಯುವಕನಿಂದ ಹೆಚ್.ಡಿ.ಕೆ ಪತ್ರ

ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಕೂಡಲೇ ಗಾಯಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಎಂ ಎಸ್ಕಾರ್ಟ್ ವಾಹನದಲ್ಲಿ ಸಿಪಿಐ ರಮಾಕಾಂತ್ ಸೇರಿ ಹಲವರಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Share This Article
Leave a comment