ಕೋಲಾರದಿಂದ ಬೇರೆ ಜಿಲ್ಲೆಗೆ ಹೆಣ್ಣು ಕೊಡುವುದನ್ನು ನಿಷೇಧ ಮಾಡಿ : ರೈತ ಯುವಕನಿಂದ ಹೆಚ್.ಡಿ.ಕೆ ಗೆ ಪತ್ರ!

election , politics , JDS

ಒಕ್ಕಲಿಗ ಯುವ ರೈತರಿಗೆ ಮದುವೆಯಾಗಲು ಯಾರೂ ಹುಡುಗಿಯರನ್ನು ಕೊಡಲ್ಲ ಈ ಸಮಸ್ಯೆ ನೀಗಲು ತಾವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಂದೆ ಯುವಕನೊಬ್ಬ ಪತ್ರ ಬರೆದು ಮನವಿ ಮಾಡಿದ್ದಾನೆ.

ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಸಮಸ್ಯೆಗಳ ಬಗ್ಗೆ ಪತ್ರ ಬರೆದಿದ್ದಾರೆ.ರಾಜ್ಯದ ಜನ ಚಳಿಗೆ ತತ್ತರ : ಕೊರೆಯುವ ಚಳಿ ನಡುವೆಯೂ ಮಳೆ ನಿರೀಕ್ಷೆ

WhatsApp Image 2022 11 22 at 1.02.49 PM

ಒಕ್ಕಲಿಗ ರೈತ ಯುವಕರಿಗೆ ಹೆಣ್ಣು ಸಿಗ್ತಾ ಇಲ್ಲ, ಬೇರೆ ಜಿಲ್ಲೆಯ ಅನುಕೂಲಸ್ಥರನ್ನು ಮದುವೆ ಮಾಡಿಕೊಡುತ್ತಿದ್ದಾರೆ. ನಿಮ್ಮ ಸರ್ಕಾರದಲ್ಲಾದರೂ ಇದಕ್ಕೆ ಪರಿಹಾರ ಕಲ್ಪಿಸಿ, ಬೇರೆ ಜಿಲ್ಲೆಯ ಯುವಕರನ್ನು ಮದುವೆ ಆಗದಂತೆ ರೂಲ್ಸ್ ಮಾಡಿ ಎಂದು ಹೆಚ್ ಡಿ.ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

ಇತ್ತೀಚಿಗೆ ಆದಿ ಚುಂಚನಗಿರಿ ವಧು ವರರ ಸಮಾವೇಶ ಭಾರೀ ಸದ್ದು ಮಾಡಿತ್ತು. 200 ವಧುಗಳಿಗಾಗಿ ಬರೋಬ್ಬರಿ 11000 ಅರ್ಜಿ ಬಂದಿದ್ದವು. ಇದೀಗ ಕೋಲಾರದಲ್ಲಿ ಒಕ್ಕಲಿಗ ಯುವಕನ ಡಿಫರೆಂಟ್ ಬೇಡಿಕೆ ಇಟ್ಟಿದ್ದಾನೆ.

Leave a comment

Leave a Reply

Your email address will not be published. Required fields are marked *

error: Content is protected !!