ಕೊರೊನಾ ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು.
ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ಸಿಎಂ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮಹತ್ವದ ನಿರ್ಧಾರ ವಿವರಿಸಿದರು.
1250 ಕೋಟಿ ರು ಪ್ಯಾಕೇಜ್ :
ಲಾಕ್ ಡೌನ್ ವೇಳೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಸರ್ಕಾರದ ಧ್ಯೇಯವಾಗಿತ್ತು.
ಸರ್ಕಾರ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸುತ್ತಿದ್ದೇವೆ ಎಂದರು.
ಪರಿಹಾರ ಘೋಷಣೆಯ ಮುಖ್ಯಾಂಶಗಳು :
- 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಣೆ
- ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪರಿಹಾರ ನೀಡುತ್ತಿದ್ದೇವೆ. 12.73 ಕೋಟಿ ಹಣವನ್ನು ಇದಕ್ಕೆ ಮೀಸಲಿಡಲಾಗಿದೆ.
- ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ಪರಿಹಾರ ಘೋಷಣೆ. ಇದಕ್ಕೆ 70 ಕೋಟಿ ಮೀಸಲು.
- ಅಟೋ, ಓಲಾ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ಪರಿಹಾರ
- ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರು ಪರಿಹಾರ
- ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ಪರಿಹಾರ.
- ಸವಿತಾ ಸಮಾಜಕ್ಕೆ 2 ಸಾವಿರ, ಪರಿಹಾರ.
- ಕಲಾವಿದರಿಗೆ 3 ಸಾವಿರ ಪರಿಹಾರ.
- ರೈತರಿಗೆ ದೀರ್ಘಾವಧಿಯ ಸಾಲ 2021 ರ ಜುಲೈ 31 ರ ತನಕ ಮರುಪಾವತಿಗೆ ವಿಸ್ತರಣೆ. ಇದಕ್ಕೆ 135 ಕೋಟಿ ವೆಚ್ಚ.
- ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಪಡಿತರ ವಿತರಣೆ
- ಎಪಿಎಲ್ ಕಾರ್ಡ್‌ದಾರರಿಗೆ 15 ರೂ.ನಲ್ಲಿ ಅಕ್ಕಿ ವಿತರಣೆ
- ಮೇ, ಜೂನ್ ತಿಂಗಳಲ್ಲಿ ಉಚಿತ ಪಡಿತರ ನೀಡಲು ತೀರ್ಮಾನ
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ