ಬಹುನಿರೀಕ್ಷಿತ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಮೇ ಅಂತ್ಯ ವೇಳೆಗೆ ಬೆಂಗಳೂರಿನಲ್ಲೇ ಲಭ್ಯವಾಗುವ ನಿರೀಕ್ಷೆಗಳಿವೆ.
ಸ್ಪುಟ್ನಿಕ್ ಲಸಿಕೆ ಅಭಿಯಾನವನ್ನು ಆರಂಭಿಸುವ ಸಂಬಂಧ ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಡಾ. ರೆಡ್ಡೀಸ್ ಲ್ಯಾಬ್ ಒಪ್ಪಂದ ಮಾಡಿಕೊಂಡಿವೆ.
ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ಎಲ್ಲಾ ಅಪೋಲೋ ಆಸ್ಪತ್ರೆಗಳಲ್ಲೂ ಲಸಿಕೆ ಲಭ್ಯವಾಗಲಿದೆ.
ಲಸಿಕೆಯ ದರ ರೂ.1,200 ರಿಂದ 1,250 ರಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಲಸಿಕೆ ಪ್ರಮಾಣಗಳು ಕಡಿಮೆ ಇರಬಹುದು. ಲಸಿಕೆ ಸಂಗ್ರಹಣೆ, ಸಾರಿಗೆ, ಆಡಳಿತ ಮತ್ತು ಮೇಲ್ವಿಚಾರಣೆಗಾಗಿ ಡಿಆರ್‌ಎಲ್ ಅಪೊಲೊವನ್ನು ಅವಲಂಬಿಸಿದೆ.
ಪ್ರಾಯೋಗಿಕ ಭಾಗವಾಗಿ ರಷ್ಯಾದ ಡಿಆರ್‌ಎಲ್’ನಿಂದ 1.5 ಲಕ್ಷ ಲಸಿಕೆಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಮದಾಗಲಿದೆ ಎಂದು ಗೊತ್ತಾಗಿದೆ.
ಒಂದು ತಿಂಗಳಲ್ಲಿ 10 ಲಕ್ಷ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.