ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ‌ ದಾಳಿ: 58 ಲಕ್ಷ ಜಪ್ತಿ

Team Newsnap
1 Min Read
Chitradurga JDS candidate Raghu Achar's house raided: 58 lakh seized ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ‌ ದಾಳಿ: 58 ಲಕ್ಷ ಜಪ್ತಿ

ಚಿತ್ರದುರ್ಗದ ಹೊರವಲಯದ ಕ್ಯಾದಿಗೆರೆ ಬಳಿಯಿರುವ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಮನೆಯ ಮೇಲೆ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು 58.83 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದರೆ.

ಮತದಾರರಿಗೆ ಹಂಚುವ ಉದ್ದೇಶದಿಂದ ಕವರ್ ಗಳಿಗೆ ಹಾಕಿದ್ದ 50 ಲಕ್ಷ ಹಾಗೂ ಪ್ರತ್ಯೇಕವಾಗಿದ್ದ 8.83 ಲಕ್ಷ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳವಾರ ರಾತ್ರಿ ದಾಳಿ ನಡೆಸಿದ್ದ ಅಧಿಕಾರಿಗಳು ಬುಧವಾರ ಕೂಡಾ ತಪಾಸಣೆ ಮುಂದುವರೆಸಿದ್ದಾರೆ.

ವಿಚಕ್ಷಣಾ‌ ದಳದ ಅಧಿಕಾರಿ ರಾಘವೇಂದ್ರ, ಅಬಕಾರಿ‌ ಅಧಿಕಾರಿ ಇಮ್ರಾನ್, ನೋಡೆಲ್ ಅಧಿಕಾರಿ ಮಧುಸೂದನ್ ನೇತೃತ್ವ ದಲ್ಲಿ ದಾಳಿ ನಡೆದಿದೆ.

ರಘು‌ಆಚಾರ್ ನಿವಾಸದಲ್ಲಿ 239 ಲೀಟರ್ ಬಿಯರ್ ಹಾಗೂ 9 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.ಚುನಾವಣಾ ಶಾಯಿ ( Election ink )

ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಿತ್ರದುರ್ಗದ ಸಾಧಿಕ್ ನಗರದಲ್ಲಿ 1.08 ಲಕ್ಷ ಹಾಗೂ ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ 4.25 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

Share This Article
Leave a comment