ಸದ್ದಿಲ್ಲದೇ ನೇಪಾಳದ ಗಡಿಯನ್ನು ಆಕ್ರಮಿಸಲು ಚೀನಾ ಸೇನೆ ಯತ್ನ

Team Newsnap
1 Min Read

ಆಕ್ರಮಣಕಾರೀ ಧೋರಣೆಯನ್ನು ಅನುಸರಿಸುವ ಚೀನಾ ಸೇನೆ ಇದೀಗ ನೇಪಾಳದ ಗಡಿಯನ್ನು ಮೆಲ್ಲಗೆ ಆಕ್ರಮಿಸುವ ಹುನ್ನಾರ ನಡೆಯುತ್ತಿದೆ.

ಚೀನಾದ ಪೀಪಲ್ ಲಿಬರೇಶನ್ ಆರ್ಮಿ‌ ನೇಪಾಳದ ಗಡಿಯಲ್ಲಿ ಈಗಾಗಲೇ ೯ ಕಟ್ಟಡಗಳನ್ನು ನಿರ್ಮಿಸಿರುವುದು ನೇಪಾಳಕ್ಕೆ ಬಿಸಿ ತುಪ್ಪವಾಗಿದೆ.

ನೇಪಾಳದ ಗಡಿಯ ಒಳಗಡೆ ಸುಮಾರು ೨ ಕಿಮಿ ದೂರವಿರುವ ನಾಮ್ಖಾ ಪುರಸಭೆಯ ಅಧ್ಯಕ್ಷ ವಿಷ್ಣು ಬಹದ್ದೂರ್ ಲಾಮಾ‌ ಅವರು, ಚೀನಾದ ಈ ಅತಿಕ್ರಮ‌ ನಡೆಯನ್ನು ಒಂದು ತಿಂಗಳ ಹಿಂದೆಯೇ ಗಮನಿಸಿದ್ದಾರೆ ಎಂದು ಹೇಳಲಾಗಿದೆ.

ಚಿಕ್ಕ ಕಟ್ಟಡಗಳು ಮೇಲೆದ್ದಿರುವ ಪ್ರದೇಶಕ್ಕೆ‌ ಚೀನಿ ಸೈನಿಕರು ಯಾವುದೇ ಸಾರ್ವಜನಿಕರಿಗೆ ಅನುಮತಿ ನೀಡುತ್ತಿಲ್ಲ. ಅಲ್ಲದೇ ನಾಮ್ಖಾ ಪುರಸಭೆಯ ಅಧ್ಯಕ್ಷ ವಿಷ್ಣು ಅವರು ಚೀನಿ ಕಟ್ಟಡದ ಸ್ಥಳಕ್ಕೆ ಭೇಟಿ‌ ನೀಡಿದಾಗ ಅವರಿಗೂ ಪ್ರವೇಶ ನಿರಾಕರಿಸಲಾಗಿದೆ.

ನಂತರ ವಿಷ್ಣು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿ ನೇಪಾಳ ಸರ್ಕಾರಕ್ಕೆ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವರದಿಯೊಂದನ್ನು ಕಳಿಸಿದ್ದಾರೆ.ಚೀನಿಯರು ಆಕ್ರಮಣ ಮಾಡಲು ಬಯಸಿರುವ ಈ ಪ್ರದೇಶವು ಟಿಬೆಟ್ ಗೆ ಸಂಪರ್ಕ ಕಲ್ಪಿಸಿತ್ತದೆ. ಅಲ್ಲದೇ ಅಲ್ಲಿಂದ ಮಾನಸ ಸರೋವರವೂ ಸ್ಪಷ್ಟವಾಗಿ ಕಾಣಿಸುತ್ತದೆ. ಇದರಿಂದ ಭಾರತಕ್ಕೆ ತೊಂದರೆ ಕೊಡಬಹುದೆಂಬ ಅನುಮಾನಗಳು ಶುರುವಾಗಿವೆ.

Share This Article
Leave a comment