ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ಟಿಬೇಟ್ ಮಿಲಿಟರಿ ಕಮಾಂಡ್ ಮಾರ್ಗದರ್ಶನದ ಬ್ರಿಗೇಡ್ 4,300 ಮೀ.ಗಿಂತ ಹೆಚ್ಚು ಎತ್ತರದಲ್ಲಿ ಟ್ರಕ್ ಆಧಾರಿತ ಬಹು ರಾಕೆಟ್ ಚಾಲಿತ ಸಿಡಿಮದ್ದುಗಳ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ ಎಂದು ಅಲ್ಲಿನ ಸೇನೆ ಹೇಳಿದೆ.
ಈ ಟ್ರಕ್ ಆಧಾರಿತ ಬಹುರಾಕೆಟ್ ಶತ್ರುಗಳಿಗೆ ದೂರದಿಂದಲೇ ಅಡೆತಡೆಗಳನ್ನು ಸ್ಥಾಪಿಸಿ, ತಾಪಮಾನ ಮತ್ತು ಆಮ್ಲಜನಕ ಕಡಿಮೆ ಇರುವ ಇಡೀ ಪ್ರದೇಶದಲ್ಲಿ ಸಿಡಿಮದ್ದುಗಳನ್ನು ಇರಿಸುವ ಗುರಿಯನ್ನು ಸಾಧಿಸಿದೆ. ಈ ತಂತ್ರಜ್ಞಾನ ಮಾನವನಿಗಿಂತಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದು, ಯುದ್ಧದ ಕ್ಷಿಪ್ರ ಗತಿಯಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗೆ ಹೊಂದಿಕೊಳ್ಳಲಿದೆ.
ಈಗ ಗಡಿಯಲ್ಲಿ ಎರಡೂ ಕಡೆಯ ಸೇನೆ ಸನ್ನದ್ಧಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಚೀನಾದ ಸೇನೆಯಲ್ಲಿ ಇಂತಹ ಒಂದು ಆಧುನಿಕ ಶಸ್ತ್ರಾಸ್ತ್ರವನ್ನು ಚೀನಾದ ಅಧ್ಯಕ್ಷ ಕ್ಸಿ-ಜಿನ್‌ಪಿಗ್ ಚೀನಿ ಸೇನೆಗೆ ಸೇರಿಸಲು ಅನುಮತಿ ನೀಡಿರುವುದು ಮಹತ್ವದ ಸಂಗತಿ.
ಚೀನಿ ಸೇನೆಯು, ಒಂದು ಟ್ರಕ್ 40 ರಾಕೆಟ್ ಬ್ಯಾರೆಲ್‌ಗಳನ್ನು ಒಯ್ಯುತ್ತದೆ. ಹಾಗೂ ಮೊದಲೇ ನಿಗದಿ ಮಾಡಿದ ಸಮಯದ ಅಂತರದಲ್ಲಿ ಸಿಡಿಮದ್ದುಗಳು ಹಾರುತ್ತವೆ ಎಂದು ಹೇಳಿದೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು