ಟ್ರಕ್ ಆಧಾರಿತ ಸಿಡಿಮದ್ದುಗಳ ಯಶಸ್ವೀ ಪ್ರಯೋಗ ನಡೆಸಿದ‌ ಚೀನಾ

Team Newsnap
1 Min Read

ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ಟಿಬೇಟ್‌ ಮಿಲಿಟರಿ ಕಮಾಂಡ್‌ ಮಾರ್ಗದರ್ಶನದ ಬ್ರಿಗೇಡ್ 4,300 ಮೀ.ಗಿಂತ ಹೆಚ್ಚು ಎತ್ತರದಲ್ಲಿ ಟ್ರಕ್ ಆಧಾರಿತ ಬಹು ರಾಕೆಟ್ ಚಾಲಿತ ಸಿಡಿಮದ್ದುಗಳ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ ಎಂದು ಅಲ್ಲಿನ ಸೇನೆ ಹೇಳಿದೆ.

ಈ ಟ್ರಕ್ ಆಧಾರಿತ ಬಹುರಾಕೆಟ್ ಶತ್ರುಗಳಿಗೆ ದೂರದಿಂದಲೇ ಅಡೆತಡೆಗಳನ್ನು ಸ್ಥಾಪಿಸಿ, ತಾಪಮಾನ ಮತ್ತು ಆಮ್ಲಜನಕ ಕಡಿಮೆ ಇರುವ ಇಡೀ ಪ್ರದೇಶದಲ್ಲಿ ಸಿಡಿಮದ್ದುಗಳನ್ನು ಇರಿಸುವ ಗುರಿಯನ್ನು ಸಾಧಿಸಿದೆ. ಈ ತಂತ್ರಜ್ಞಾನ ಮಾನವನಿಗಿಂತಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದು, ಯುದ್ಧದ ಕ್ಷಿಪ್ರ ಗತಿಯಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗೆ ಹೊಂದಿಕೊಳ್ಳಲಿದೆ.

ಈಗ ಗಡಿಯಲ್ಲಿ ಎರಡೂ ಕಡೆಯ ಸೇನೆ ಸನ್ನದ್ಧಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಚೀನಾದ ಸೇನೆಯಲ್ಲಿ ಇಂತಹ ಒಂದು ಆಧುನಿಕ ಶಸ್ತ್ರಾಸ್ತ್ರವನ್ನು ಚೀನಾದ ಅಧ್ಯಕ್ಷ ಕ್ಸಿ-ಜಿನ್‌ಪಿ‌‌ಗ್ ಚೀನಿ ಸೇನೆಗೆ ಸೇರಿಸಲು ಅನುಮತಿ ನೀಡಿರುವುದು ಮಹತ್ವದ ಸಂಗತಿ.

ಚೀನಿ ಸೇನೆಯು, ಒಂದು ಟ್ರಕ್ 40 ರಾಕೆಟ್ ಬ್ಯಾರೆಲ್‌ಗಳನ್ನು ಒಯ್ಯುತ್ತದೆ. ಹಾಗೂ ಮೊದಲೇ ನಿಗದಿ ಮಾಡಿದ ಸಮಯದ ಅಂತರದಲ್ಲಿ ಸಿಡಿಮದ್ದುಗಳು ಹಾರುತ್ತವೆ ಎಂದು ಹೇಳಿದೆ.

TAGGED:
Share This Article
Leave a comment