ಹಾಲಿಗೆ ರಾಸಾಯನಿಕ ವಸ್ತು ಮಿಶ್ರಣ: ಕೆ ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಸೇರಿ ನಾಲ್ವರ ಬಂಧನ

Team Newsnap
1 Min Read

ಮಂಡ್ಯದ ಮನ್ಮುಲ್‌ಗೆ ರಾಸಾಯನಿಕ ಮಿಶ್ರಿತ ಹಾಲು ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ತಾಲೂಕು ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಸೇರಿ ನಾಲ್ವರ ಬಂಧಿಸಲಾಗಿದೆ.

ರೈತರಿಂದ ಹಾಲು ಸಂಗ್ರಹಿಸಿದ ಹಾಲಿಗೆ ನೀರು ಹಾಕಿ ಕೊಬ್ಬಿನಾಂಶ ಹೆಚ್ಚಿಸಲು ಕೆಮಿಕಲ್ ಅನ್ನು ದುಷ್ಕರ್ಮಿಗಳು ಮಿಶ್ರಣ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕೆ.ಹೊನ್ನಲಗೆರೆ ಡೈರಿಯಿಂದ ದಿನಕ್ಕೆ ಮನ್ಮುಲ್ ಗೆ 35 ಕ್ಯಾನ್‌‌‌ಗಳಲ್ಲಿ ಸಾವಿರಾರು ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಜ.8 ಮತ್ತು 13 ರಂದು ಪರೀಕ್ಷೆ ವೇಳೆ ಹಾಲಿಗೆ ರಾಸಾಯನಿಕ ಮಿಶ್ರಣವಾಗಿರುವುದು ಪತ್ತೆಯಾಗಿದೆ.

ಹಗರಣ ಬಯಲಿಗೆಳೆದಿದ್ದ ಮನ್ಮುಲ್ ಅಧಿಕಾರಿಗಳು :

ಅಕ್ರಮವಾಗಿ ಹಣ ಸಂಪಾದನೆ ಅಡ್ಡ ದಾರಿ ಹಿಡಿದ ದುಷ್ಕರ್ಮಿಗಳು ಹಾಲಿಗೆ
ಮಾಲ್ಟೋ ಡೆಕ್ಸ್ಟಿನ್ ಎಂಬ ರಾಸಾಯನಿಕ ಮಿಶ್ರಣ ಮಾಡುತ್ತಿದ್ದರು.

ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ಕೆಮಿಕಲ್ ಮಿಕ್ಸಿಂಗ್ ಮಾಡುತ್ತಿರುವ ಬಗ್ಗೆ ಮನ್ ಮುಲ್ ಆಡಳಿತ ಮಂಡಳಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ಪ್ರಕರಣ ಸಂಬಂಧ ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಅಂಕರಾಜು, ಟೆಸ್ಟರ್ ಸೇರಿ ನಾಲ್ವರ ಬಂಧನ ಮಾಡಲಾಗಿದೆ

70 ಹಸುಗಳನ್ನು ಸಾಕಿ ತಾನೇ ಹಾಲು ಸರಬರಾಜು ಮಾಡ್ತಿದ್ದ ಅಂಕರಾಜು ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದ. ಅಕ್ರಮ ಹಣ ಸಂಪಾದನೆಗೆ ಅಮೃತಕ್ಕೆ ವಿಷ ಬೆರೆಸುತ್ತಿದ್ದ ದುಷ್ಕರ್ಮಿಗಳು.

Share This Article
Leave a comment