ಮಂಡ್ಯದ ಮನ್ಮುಲ್‌ಗೆ ರಾಸಾಯನಿಕ ಮಿಶ್ರಿತ ಹಾಲು ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ತಾಲೂಕು ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಸೇರಿ ನಾಲ್ವರ ಬಂಧಿಸಲಾಗಿದೆ.
ರೈತರಿಂದ ಹಾಲು ಸಂಗ್ರಹಿಸಿದ ಹಾಲಿಗೆ ನೀರು ಹಾಕಿ ಕೊಬ್ಬಿನಾಂಶ ಹೆಚ್ಚಿಸಲು ಕೆಮಿಕಲ್ ಅನ್ನು ದುಷ್ಕರ್ಮಿಗಳು ಮಿಶ್ರಣ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕೆ.ಹೊನ್ನಲಗೆರೆ ಡೈರಿಯಿಂದ ದಿನಕ್ಕೆ ಮನ್ಮುಲ್ ಗೆ 35 ಕ್ಯಾನ್‌ಗಳಲ್ಲಿ ಸಾವಿರಾರು ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಜ.8 ಮತ್ತು 13 ರಂದು ಪರೀಕ್ಷೆ ವೇಳೆ ಹಾಲಿಗೆ ರಾಸಾಯನಿಕ ಮಿಶ್ರಣವಾಗಿರುವುದು ಪತ್ತೆಯಾಗಿದೆ.
ಹಗರಣ ಬಯಲಿಗೆಳೆದಿದ್ದ ಮನ್ಮುಲ್ ಅಧಿಕಾರಿಗಳು :
ಅಕ್ರಮವಾಗಿ ಹಣ ಸಂಪಾದನೆ ಅಡ್ಡ ದಾರಿ ಹಿಡಿದ ದುಷ್ಕರ್ಮಿಗಳು ಹಾಲಿಗೆ
ಮಾಲ್ಟೋ ಡೆಕ್ಸ್ಟಿನ್ ಎಂಬ ರಾಸಾಯನಿಕ ಮಿಶ್ರಣ ಮಾಡುತ್ತಿದ್ದರು.
ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ಕೆಮಿಕಲ್ ಮಿಕ್ಸಿಂಗ್ ಮಾಡುತ್ತಿರುವ ಬಗ್ಗೆ ಮನ್ ಮುಲ್ ಆಡಳಿತ ಮಂಡಳಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
ಪ್ರಕರಣ ಸಂಬಂಧ ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಅಂಕರಾಜು, ಟೆಸ್ಟರ್ ಸೇರಿ ನಾಲ್ವರ ಬಂಧನ ಮಾಡಲಾಗಿದೆ
70 ಹಸುಗಳನ್ನು ಸಾಕಿ ತಾನೇ ಹಾಲು ಸರಬರಾಜು ಮಾಡ್ತಿದ್ದ ಅಂಕರಾಜು ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದ. ಅಕ್ರಮ ಹಣ ಸಂಪಾದನೆಗೆ ಅಮೃತಕ್ಕೆ ವಿಷ ಬೆರೆಸುತ್ತಿದ್ದ ದುಷ್ಕರ್ಮಿಗಳು.
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ