January 16, 2025

Newsnap Kannada

The World at your finger tips!

chandan kavith 1

ಅದ್ದೂರಿಯಾಗಿ ನಡೆದ ಚಂದನ್ – ಕವಿತಾ ನಿಶ್ಚಿತಾರ್ಥ – ಮೇ ನಲ್ಲಿ ಮದುವೆ

Spread the love

6 ತಿಂಗಳು ಕಾಲ ಪ್ರೇಮಿಗಳಾಗಿದ್ದ ಕವಿತಾ ಹಾಗೂ ಚಂದನ್‌… ಲಕ್ಷ್ಮೀ ಬಾರಮ್ಮಾ ಸೀರಿಯಲ್‌ನ ಪಾಪ್ಯುಲರ್‌ ಜೋಡಿ ಈಗ ನಿಜ ಜೀವನದಲ್ಲೂ ಜೀವನ ಸಂಗಾತಿಗಳಾಗಲಿದ್ದಾರೆ.

ಕವಿತಾ ಗೌಡ ಹಾಗೂ ಚಂದನ್‌ ಕುಮಾರ್‌ ಆಫ್‌ಸ್ಕ್ರೀನ್‌ನಲ್ಲೂ ಜೋಡಿಯಾಗಿದ್ದಾರೆ. ಇಂದು ಈ ಜೋಡಿ ಇಂದು ಚಿನ್ನದ ಉಂಗುರ ವನ್ನು ಬದಲಾಯಿಸಿ ನಿಶ್ಚಿತಾರ್ಥ ಮಾಡಿಕೊಂಡಿದೆ.

ಚಂದನ್‌ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ We are getting fooled on April first ಅಂತಾ ಬರೆದುಕೊಂಡಿದ್ದರು.

chandan kavith

ಇಬ್ಬರು ಜೊತೆಗಿರುವ ಫೋಟೋ ಶೇರ್ ಮಾಡಿ, ಈ ರೀತಿ ಬರೆದುಕೊಂಡಿದ್ದರು.
ಈ ಕುರಿತಂತೆ ಮಾತನಾಡಿದ ಚಂದನ್‌, ನಾವಿಬ್ಬರು ಲಕ್ಷ್ಮೀ ಬಾರಮ್ಮಾ ಸೀರಿಯಲ್‌ ಸಮಯದಿಂದಲೂ ಉತ್ತಮ ಸ್ನೇಹಿತರು. ನಾವೆಲ್ಲರೂ ಸೇರಿ ಫೀಸ್‌ ಫ್ಯಾಕ್ಟರಿ ಅನ್ನೋ ಫ್ರೆಂಡ್‌ ಗ್ರೂಪ್‌ನಲ್ಲಿದ್ವಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ವಿ. ಆರು ತಿಂಗಳ ಹಿಂದೆ ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದೆವು. 6 ತಿಂಗಳಿನಿಂದ ನಾವಿಬ್ಬರು ಪ್ರೇಮಿಗಳಾದ್ವಿ. ಏಪ್ರಿಲ್ ಮೇ ತಿಂಗಳಲ್ಲಿ ಮದುವೆಯಾಗಲಿದ್ದೇವೆ ಎಂದು ಹೇಳಿದ್ದಾರೆ.‌

Copyright © All rights reserved Newsnap | Newsever by AF themes.
error: Content is protected !!