ಕಂದಾಯ ನಿರೀಕ಼್ಷಕ ಅಧಿಕಾರಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಸದಾಶಿವ ನಗರದಲ್ಲಿ ಇಂದು ಜರುಗಿದೆ.
ಚೈತ್ರಾ (25) ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡವರು.
ಕೊಪ್ಪಳ ನಗರಸಭೆಯಲ್ಲಿ ಚೈತ್ರಾ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಗಂಡನ ಜೊತೆಯಲ್ಲಿ ವಾಸವಾಗಿದ್ದರು. ಇಂದು ಬೆಳಗಿನ ಜಾವ ಗಂಡನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಗಂಡ ಹೆಂಡತಿ ಇಬ್ಬರೂ ಚೆನ್ನಾಗಿಯೇ ಇದ್ದರು. ಇಬ್ಬರು ನಡುವೆ ಯಾವುದೇ ಜಗಳ ಗಲಾಟೆ ಇರಲಿಲ್ಲ. ಆದರೆ ಅವರ ಸಾವಿಗೆ ಬೇರೆ ಕಾರಣ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
More Stories
ಧಾರವಾಡದಲ್ಲಿ ನಕಲಿ ನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ
ಮಗಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂತವೈದ್ಯೆ – ಸಾವಿಗೆ ಹಲವು ಅನುಮಾನ
ಪ್ರವೀಣ್ ನೆಟ್ಟಾರು ಹತ್ಯೆ – ಮತ್ತಿಬ್ಬರು ಸೇರಿ 6 ಮಂದಿ ಬಂಧನ