ಸ್ವಂತ ಉದ್ಯಮಕ್ಕೆ 10 ಲಕ್ಷ ರುಗಳ ತನಕ ಕೇಂದ್ರ ಸಾಲ ಯೋಜನೆ ಜಾರಿ‌

Team Newsnap
1 Min Read

ನೀವು ಸ್ವಂತ ಉದ್ಯಮ ಆರಂಭಿಸುವ ಆಸಕ್ತಿ ಇದೆಯೇ? ಹಾಗಾದರೆ ಕೇಂದ್ರ ಸರ್ಕಾರ ನಿಮ್ಮ ನೆರವಿಗಾಗಿ ಈಗಾಗಲೇ ಯೋಜನೆ ಅನುಷ್ಠಾನಗೊಳಿಸಿದೆ.

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮುದ್ರಾ ಯೋಜನೆ ಕಾರ್ಯಗತಗೊಳಿಸಿದೆ.

ಪ್ರಪಂಚದಾದ್ಯಂತ ಇಂದು “ವಿಶ್ವ ಉದ್ಯಮಿಗಳ ದಿನ’ ಅಚರಿಸಲಾಗುತ್ತಿದೆ. ಸಣ್ಣ ಉದ್ಯಮ ಸ್ಥಾಪನೆ, ಕೃಷಿ ಸಂಬಂಧಿಸಿದ ಕೆಲಸಗಳಿಗೂ ಮುದ್ರಾ ಯೋಜನೆ ಸಹಕಾರಿ.

ಮೂರು ವರ್ಗಗಳಲ್ಲಿ ಸಾಲ ಸಿಗಲಿದೆ. ಮುದ್ರಾ ಶಿಶು ಅಡಿ ೫೦,೦೦೦ರೂ., ಮುದ್ರಾ ಕಿಶೋರ್ ಯೋಜನೆಯಲ್ಲಿ ೫೦,೦೦೦ದಿಂದ ೫ ಲಕ್ಷರೂ.ವರೆಗೆ ಹಾಗೂ ಮುವದ್ರಾ ತರುಣ್ ವರ್ಗದಲ್ಲಿ ೫ ಲಕ್ಷ ದಿಂದ ೧೦ ಲಕ್ಷರು. ತನಕ ಸಾಲ ಪಡೆಯಬಹುದು.

ಸಾಲ ಪಡೆಯಲು ಅರ್ಜಿ ನಮೂನೆಯೊಂದಿಗೆ ಆಧಾರ್, ವೋಟರ್ ಐಡಿ, ಪ್ಯಾನ್, ಡಿಎಲ್‌ನಂಥ ಗುರುತಿನ ಪುರಾವೆ ನೀಡುವುದು ಅಗತ್ಯ. ಅಲ್ಲದೆ ವ್ಯಾಪಾರದ ಪ್ರಮಾಣಪತ್ರ ಸಲ್ಲಿಸ ಬೇಕು.

ಮಹಿಳಾ ಉದ್ಯಮಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
೨೦೧೫ರ ಏಪ್ರಿಲ್ ೮ ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭವಾಯಿತು.

ಉದ್ಯಮಶೀಲತೆ ಉತ್ತೇಜನವೇ ಯೋಜನೆಯ ಆಶಯ. ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಎಂಎಫ್‌ಐ ಮತ್ತು ಎನ್‌ಬಿಎಫ್‌ಸಿಗಳಿಂದಲೂ ಸಾಲ ಪಡೆಯಬಹುದು.

Share This Article
Leave a comment