ಗಾಂಜಾ ಮಾರಾಟ ಪ್ರಕರಣ ಯುವತಿ ಸೇರಿ ಮೂವರು ಪೆಡ್ಲರ್ಸ್ ಬಂಧಿಸಿದ ಸಿಸಿಬಿ

Team Newsnap
1 Min Read

ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್​ ಸಿಬ್ಬಂದಿಯಿಂದ, ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೇ ಓರ್ವ ಯುವತಿ ಸೆರಿದಂತೆ ಮೂವರು ಪೆಡ್ಲರ್ಸ್​ನ್ನು ಸಿಸಿಬಿ ಬಂಧನ ಮಾಡಿದೆ.

ಶಿವ ಪಾಟೀಲ್, ಸೋಮ ಸುಂದರಂ ಹಾಗೂ ಯುವತಿ ಪೂಜಾ ಸಿಸಿಬಿ ಬಲೆಗೆ ಬಿದ್ದಿರುವ ಪೆಡ್ಲರ್ಸ್​.

ಆರೋಪಿತ ಕಾನ್ಸ್​ಟೇಬಲ್​ಗಳಿಗೆ ಇವರ ಸಂಪರ್ಕ ಇತ್ತು ಎನ್ನಲಾಗುತ್ತಿದೆ.
ಆರೋಪಿಗಳು ಓರಿಸ್ಸಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಕಾಲೇಜ್ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತಿದ್ದ ಆರೋಪಿಗಳು, ಬಿಟಿಎಂ ಲೇಔಟ್ ಸುತ್ತಮುತ್ತಲಿನ ಏರಿಯಾದ ಕಾಲೇಜ್ ಬಳಿ ದಂಧೆ ನಡೆಸುತ್ತಿದ್ದರಂತೆ.

ಸದ್ಯ ಈ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 5.76 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

Share This Article
Leave a comment