ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯಿಂದ, ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೇ ಓರ್ವ ಯುವತಿ ಸೆರಿದಂತೆ ಮೂವರು ಪೆಡ್ಲರ್ಸ್ನ್ನು ಸಿಸಿಬಿ ಬಂಧನ ಮಾಡಿದೆ.
ಶಿವ ಪಾಟೀಲ್, ಸೋಮ ಸುಂದರಂ ಹಾಗೂ ಯುವತಿ ಪೂಜಾ ಸಿಸಿಬಿ ಬಲೆಗೆ ಬಿದ್ದಿರುವ ಪೆಡ್ಲರ್ಸ್.
ಆರೋಪಿತ ಕಾನ್ಸ್ಟೇಬಲ್ಗಳಿಗೆ ಇವರ ಸಂಪರ್ಕ ಇತ್ತು ಎನ್ನಲಾಗುತ್ತಿದೆ.
ಆರೋಪಿಗಳು ಓರಿಸ್ಸಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕಾಲೇಜ್ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತಿದ್ದ ಆರೋಪಿಗಳು, ಬಿಟಿಎಂ ಲೇಔಟ್ ಸುತ್ತಮುತ್ತಲಿನ ಏರಿಯಾದ ಕಾಲೇಜ್ ಬಳಿ ದಂಧೆ ನಡೆಸುತ್ತಿದ್ದರಂತೆ.
ಸದ್ಯ ಈ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 5.76 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ