December 22, 2024

Newsnap Kannada

The World at your finger tips!

rohit sharma

ಮೊದಲ T20ಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು : DK ಅಮೋಘ ಆಟ – ಕೆರಿಬಿಯನ್ನರಿಗೆ ಮತ್ತೆ ನಿರಾಶೆ

Spread the love

ವೆಸ್ಟ್ ವಿಂಡೀಸ್ ನ ಬ್ರಿಯಾನ್​ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಚುಟುಕು ಕದನದಲ್ಲಿ 68 ರನ್​​ಗಳಿಂದ ವೆಸ್ಟ್​​​​​ ಇಂಡೀಸ್​​​ ಅನ್ನು ಟೀ ಇಂಡಿಯಾ ಮಣಿಸಿದೆ. ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​​​​​​​​​​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ, ಉತ್ತಮ ಆರಂಭ ಪಡೆಯಿತು. ರೋಹಿತ್​​ ಶರ್ಮಾ – ಸೂರ್ಯ ಕುಮಾರ್​, ಮೊದಲ ವಿಕೆಟ್​ಗೆ 44 ರನ್​​ ಕಲೆ ಹಾಕಿದರು. ಆದ್ರೆ ಸೂರ್ಯ 24 ರನ್​ ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್​​​ ಅಯ್ಯರ್​​ ಡಕೌಟ್ ಆದ್ರೆ, ರಿಷಭ್​ ಪಂತ್​​​ 14 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಇವರಷ್ಟೆ ಅಲ್ಲ, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಕೂಡ ಬೇಗನೇ ಔಟಾದರು.

ನಾಯಕ ರೋಹಿತ್ ಕುಸಿದ ತಂಡಕ್ಕೆ ಜೀವ ತುಂಬಿ ವಿಂಡೀಸ್​ ಬೌಲರ್​​​​ಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದಲ್ಲದೆ, ಅರ್ಧಶತಕವನ್ನೂ ಸಿಡಿಸಿದರು. 64 ರನ್ ​​ಗಳಿಸಿದ್ದಾಗ ಔಟಾದರು. ಇನ್ನು ಅಂತಿಮ ಹಂತದಲ್ಲಿ ದಿನೇಶ್​​ ಕಾರ್ತಿಕ್​ ಸ್ಫೋಟಕ ಬ್ಯಾಟಿಂಗ್​​ ನಡೆಸಿದ್ರು. ಅಜೇಯ 41 ರನ್​ ಸಿಡಿಸಿದ ಡಿಕೆ.

ಬೌಂಡರಿ – ಸಿಕ್ಸರ್​ಗಳ ಸುರಿಮಳೆಗೈದು ಫಿನಿಷಿಂಗ್​ ರೋಲ್​​​​​ ಅನ್ನ ಅದ್ಭುತವಾಗಿ ನಿಭಾಯಿಸಿದ್ರು. ಡಿಕೆಗೆ ಅಶ್ವಿನ್​ ಸಖತ್ತಾಗಿ ಸಾಥ್​ ನೀಡಿದ್ರು. ಈ ಜೋಡಿ 25 ಎಸೆತಗಳಲ್ಲಿ 52 ರನ್​ಗಳನ್ನು ಸೇರಿಸಿದರು.

ಅಂತಿಮವಾಗಿ ಭಾರತ 20 ಓವರ್​​​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 190 ರನ್​​​ಗಳ ಕಠಿಣ ಮೊತ್ತ ಪೇರಿಸಿತು. ವಿಂಡೀಸ್​ ಪರ ಅಲ್ಜಾರಿ ಜೋಸೆಫ್​​ 2 ವಿಕೆಟ್​, ಒಬೆಡ್​ ಮೆಕಾಯ್​, ಹೋಲ್ಡರ್​​, ಹೊಸೈನ್​, ಕಿಮೋ ಪೌಲ್​ ತಲಾ 1 ವಿಕೆಟ್​ ಪಡೆದ್ರು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್​​​​, ಟಿ20 ಸ್ಪೆಷಲಿಸ್ಟ್​​ಗಳನ್ನೇ ಹೊಂದಿದ್ರೂ, ಭಾರತೀಯ ಬೌಲರ್​​ಗಳ ಮುಂದೆ ಮಂಕಾಯ್ತು.

ಆರಂಭದಲ್ಲೇ ಕೈಲ್​ ಮೇಯರ್ಸ್​, ಜೇಸನ್​ ಹೋಲ್ಡರ್ ವಿಕೆಟ್ ಕಳೆದುಕೊಂಡು ಕೊನೆಯಲ್ಲಿ ಟೀ ಇಂಡಿಯಾ 68 ರನ್ ಗಳ ಜಯ ಲಭಿಸಿತು.

Copyright © All rights reserved Newsnap | Newsever by AF themes.
error: Content is protected !!