ವೆಸ್ಟ್ ವಿಂಡೀಸ್ ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಚುಟುಕು ಕದನದಲ್ಲಿ 68 ರನ್ಗಳಿಂದ ವೆಸ್ಟ್ ಇಂಡೀಸ್ ಅನ್ನು ಟೀ ಇಂಡಿಯಾ ಮಣಿಸಿದೆ. ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ, ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ – ಸೂರ್ಯ ಕುಮಾರ್, ಮೊದಲ ವಿಕೆಟ್ಗೆ 44 ರನ್ ಕಲೆ ಹಾಕಿದರು. ಆದ್ರೆ ಸೂರ್ಯ 24 ರನ್ ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಡಕೌಟ್ ಆದ್ರೆ, ರಿಷಭ್ ಪಂತ್ 14 ರನ್ಗೆ ವಿಕೆಟ್ ಒಪ್ಪಿಸಿದ್ರು. ಇವರಷ್ಟೆ ಅಲ್ಲ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕೂಡ ಬೇಗನೇ ಔಟಾದರು.
ನಾಯಕ ರೋಹಿತ್ ಕುಸಿದ ತಂಡಕ್ಕೆ ಜೀವ ತುಂಬಿ ವಿಂಡೀಸ್ ಬೌಲರ್ಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದಲ್ಲದೆ, ಅರ್ಧಶತಕವನ್ನೂ ಸಿಡಿಸಿದರು. 64 ರನ್ ಗಳಿಸಿದ್ದಾಗ ಔಟಾದರು. ಇನ್ನು ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. ಅಜೇಯ 41 ರನ್ ಸಿಡಿಸಿದ ಡಿಕೆ.
ಬೌಂಡರಿ – ಸಿಕ್ಸರ್ಗಳ ಸುರಿಮಳೆಗೈದು ಫಿನಿಷಿಂಗ್ ರೋಲ್ ಅನ್ನ ಅದ್ಭುತವಾಗಿ ನಿಭಾಯಿಸಿದ್ರು. ಡಿಕೆಗೆ ಅಶ್ವಿನ್ ಸಖತ್ತಾಗಿ ಸಾಥ್ ನೀಡಿದ್ರು. ಈ ಜೋಡಿ 25 ಎಸೆತಗಳಲ್ಲಿ 52 ರನ್ಗಳನ್ನು ಸೇರಿಸಿದರು.
ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ಗಳ ಕಠಿಣ ಮೊತ್ತ ಪೇರಿಸಿತು. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್, ಒಬೆಡ್ ಮೆಕಾಯ್, ಹೋಲ್ಡರ್, ಹೊಸೈನ್, ಕಿಮೋ ಪೌಲ್ ತಲಾ 1 ವಿಕೆಟ್ ಪಡೆದ್ರು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್, ಟಿ20 ಸ್ಪೆಷಲಿಸ್ಟ್ಗಳನ್ನೇ ಹೊಂದಿದ್ರೂ, ಭಾರತೀಯ ಬೌಲರ್ಗಳ ಮುಂದೆ ಮಂಕಾಯ್ತು.
ಆರಂಭದಲ್ಲೇ ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್ ವಿಕೆಟ್ ಕಳೆದುಕೊಂಡು ಕೊನೆಯಲ್ಲಿ ಟೀ ಇಂಡಿಯಾ 68 ರನ್ ಗಳ ಜಯ ಲಭಿಸಿತು.
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು
- ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು
- ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023