ಪಂಜಾಬ್ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್

Team Newsnap
1 Min Read

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಜೊತೆಗಿನ ವೈಮನಸ್ಸಿನಿಂದ ಬೇಸತ್ತಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ರಾಜಿನಾಮೆ ಪತ್ರ ನೀಡಿದರು.

ನವಜೋತ್​ ಸಿಂಗ್​ರನ್ನ ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ನಂತರ ನವಜೋತ್ ಸಿಂಗ್​ರನ್ನ ಅಧ್ಯಕ್ಷ ಸ್ಥಾನದಲ್ಲಿ ನೋಡುವುದು ಕ್ಯಾಪ್ಟನ್ ಅಮರಿಂದರ್ ಸಿಂಗ್​ಗೆ ಇಷ್ಟವಿರಲಿಲ್ಲ ಎನ್ನಲಾಗಿತ್ತು.

ತಮ್ಮನ್ನು ಪಕ್ಷದಲ್ಲಿ ಸೈಡ್​ಲೈನ್ ಮಾಡಲಾಗುತ್ತಿದೆ ಎನ್ನುವುದು ಕ್ಯಾಪ್ಟನ್ ಅಮರಿಂದರ್​​ ಸಿಂಗ್​ ವಾದ.

ಇಂದು ನಡೆದ ಒಂದಿಷ್ಟು ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಮಧ್ಯೆ ಸೋನಿಯಾ ಗಾಂಧಿಗೆ ಕರೆ ಮಾಡಿ ಮಾತನಾಡಿರುವ ಕ್ಯಾಪ್ಟನ್ ಅಮರಿಂದರ್ ಪಕ್ಷದಲ್ಲಿ ನನ್ನನ್ನು ಸೈಡ್​ಲೈನ್ ಮಾಡಿದ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದಿದ್ದರು ಅಂತಾ ವರದಿಯಾಗಿತ್ತು.

ಈ ನಡುವೆ ಬಿಜೆಪಿ ಉತ್ತರಖಾಂಡ್, ಕರ್ನಾಟಕ ಹಾಗೂ ಗುಜರಾತ್ ನಲ್ಲಿ ಮುಖ್ಯ ಮಂತ್ರಿಗಳನ್ನು ಬದಲಾವಣೆ ಮಾಡಿದ ಸೂತ್ರವನ್ನೇ‌ ಕಾಂಗ್ರೆಸ್ ಅನುಸರಿಸಿದಂತೆ ಕಾಣುತ್ತದೆ. ಹೀಗಾಗಿ ಪಂಜಾಬ್ ನಲ್ಲಿ ಯುವ ನಾಯಕನನ್ನು ಸಿಎಂ ಆಗಿ‌ ನೇಮಕ ಮಾಡುವ ಸಾಧ್ಯತೆ ಇದೆ.

Share This Article
Leave a comment