ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ: ಅಭ್ಯರ್ಥಿಗಳ ಪೈಪೋಟಿ

Team Newsnap
1 Min Read

ಸಿಂದಗಿ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ.

ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಾಧ್ಯತೆ?:

ಸಿಂದಗಿ ಕ್ಷೇತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಇದೆ. ಸ್ಥಳೀಯ ನಾಯಕ ರಮೇಶ್ ಭೂಸನೂರು ಸಹ ಸಿಂದಗಿ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ವರ್ಸಸ್ ರಮೇಶ್ ಭೂಸನೂರು ಎಂಬಂತೆ ಬಿಂಬಿತವಾಗಿದೆ.

ಜೆಡಿಎಸ್ ನಿಂದ ಮನಗೂಳಿ ಪುತ್ರನಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ನಿಂದ ಮನಗೂಳಿ ಪುತ್ರನ ಆಪರೇಷನ್ ತಂತ್ರದ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

ಮಸ್ಕಿಯಲ್ಲಿ ಯಾರಿಗೆ?

ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾದ್ರೆ, ಕಾಂಗ್ರೆಸ್ ನಿಂದ ಆರ್.ಬಸನಗೌಡ ತುರುವಿಹಾಳ ಸ್ಪರ್ಧಿಸೋದು ಖಚಿತವಾಗಿದೆ.

ಆದ್ರೆ ಮಸ್ಕಿಯಲ್ಲಿ ಇಬ್ಬರು ಅಭ್ಯರ್ಥಿಗಳು ಕಳೆದ ಬಾರಿ ಸ್ಪರ್ಧೆ ಮಾಡಿದ್ದರು. ಆದ್ರೆ ಈ ಬಾರಿ ಪಕ್ಷಗಳು ಅದಲು ಬದಲು ಆಗಿದೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದು ಅನುಮಾನ

ಬಸವಕಲ್ಯಾಣ ಕುತೂಹಲ‌:

ಬಸವಕಲ್ಯಾಣದಲ್ಲೂ ಬಿಜೆಪಿಯಿಂದ ಮೂವರು, ಕಾಂಗ್ರೆಸ್ ನಿಂದ ನಾರಾಯಣ್ ರಾವ್ ಪುತ್ರನ ಸ್ಪರ್ಧೆ ಬಗ್ಗೆ ಸರ್ಕಸ್ ನಡೆದಿದೆ, ಅಂತಿಮವಾಗಿಲ್ಲ. ಬಸವಕಲ್ಯಾಣದ ಅಖಾಡದಿಂದಲೂ ಜೆಡಿಎಸ್ ದೂರ ಉಳಿಯುವ ಸಾಧ್ಯತೆಗಳಿವೆ.

ಅಂಗಡಿ ಪುತ್ರಿ ಗೆ ಟಿಕೆಟ್ ?

ಈ ನಡುವೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ, ಆರ್ ಎಸ್ ಎಸ್ ಹಿನ್ನೆಲೆವುಳ್ಳ ವೈದ್ಯ ರವಿ ಪಾಟೀಲ್ ನಡುವೆ ಪೈಪೋಟಿ ಇದೆ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಅವರನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.

ಒಟ್ಟಾರೆ ಮುಂದಿನ ವಾರ ಅಥವಾ ಇಂದು ಸಂಜೆಯೇ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯನ್ನು ಎದುರು ನೋಡ್ತಿವೆ.

Share This Article
Leave a comment