3 ತಿಂಗಳ ಹಿಂದೆ ಹೂತಿದ್ದ ಶವವನ್ನು ಕಿಡಿಗೇಡಿಗಳು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಯಾದಾಪುರ ಗ್ರಾಮದಲ್ಲಿ ಜರುಗಿದೆ.
ಲಕ್ಷ್ಮಮ್ಮ (85 ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರನ್ನು ಮಕ್ಕಳು ಸ್ವಂತ ಜಮೀನಿನಲ್ಲಿ ಮಣ್ಣು ಮಾಡಿದ್ದರು.
ಮೃತ ಲಕ್ಷ್ಮಮ್ಮ ಮಗ ಮಂಜುನಾಥ್ ಕೆಲಸದ ನಿಮಿತ್ತ ಕುಟುಂಬ ಸಮೇತರಾಗಿ ತಿಪಟೂರಿನಲ್ಲಿ ವಾಸವಾಗಿದ್ದಾರೆ. ಈಗ ತಮ್ಮ ಜಮೀನಿನ ಬಳಿ ಬಂದು ನೋಡಿದಾಗ ತಾಯಿಯ ಮೃತದೇಹವನ್ನು ಯಾರೋ ಕಿಡಿಗೇಡಿಗಳು ಕದ್ದೊಯ್ದಿರುವುದು ಪತ್ತೆಯಾಗಿದೆ. ವಾಮಾಚಾರಕ್ಕಾಗಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ತಾಯಿಯನ್ನು ಮಣ್ಣು ಮಾಡಿದ್ದ ಜಾಗದಲ್ಲಿ ಗೋರಿ ಕಟ್ಟಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಯಾರೋ ತಾಯಿಯ ಮೃತದೇಹವನ್ನು ಕದ್ದೊಯ್ದಿದ್ದು, ವಾಮಾಚಾರಕ್ಕೆ ಬಳಸುವ ಆತಂಕ ಶುರುವಾಗಿದೆ. ಹೀಗಾಗಿ ನಮ್ಮ ತಾಯಿಯ ಮೃತದೇಹ ಹುಡುಕಿಕೊಡಿ ಎಂದು ಮಕ್ಕಳು ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ