ಬೈಡನ್ – ಮೋದಿ ಮಾತುಕತೆ :ಭಾರತದ ನೆಂಟಸ್ಥಿಕೆಯನ್ನು ಸ್ಮರಿಸಿದ ಜೋ

Team Newsnap
1 Min Read

ಅಮೆರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್​ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.‌

ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಜೋ ಬೈಡೆನ್ ಅಧ್ಯಕ್ಷರಾದ ಬಳಿಕ ಮೋದಿ ಮುಖಾಮುಖಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.

ಪೂರ್ವಜರ ನೆನೆದ ಬೈಡನ್ :

ಈ ಭೇಟಿ ಮಾತುಕತೆಯಲ್ಲಿ ಅಧ್ಯಕ್ಷ ಜೋ ಬೈಡೆನ್​ ಭಾರತದಲ್ಲಿ ತಮ್ಮ ಪೂರ್ವಜರ ಸಂಬಂಧದ ಬಗ್ಗೆ ನೆನಪು ಮಾಡಿಕೊಂಡರು.

modi jobiden

‌ಭಾರತದಲ್ಲಿ 1872ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಇದ್ದ ವೇಳೆ ಮುಂಬೈನಲ್ಲಿ ನಮ್ಮ ಪೂರ್ವಜರು ಅಲ್ಲಿ ಕೆಲಸ ಮಾಡಿದ್ದರು. ಅದೇ ವೇಳೆ ನಮ್ಮ ಪೂರ್ವಜ ಜಾರ್ಜ್ ಬೈಡೆನ್ ಭಾರತದ ಮಹಿಳೆಯನ್ನು ಮದುವೆಯಾಗಿ ಬಂದಿದ್ದರು ಎಂಬ ವಿಷಯವನ್ನು ಮೋದಿ ಜೊತೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಕಮಲಾ ಹ್ಯಾರಿಸ್ ಗುಣಗಾನ ಮಾಡಿದ ಪ್ರಧಾನಿ:

ಭಾರತ ಮೂಲದ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಹೆಸರು ಉಲ್ಲೇಖಸಿದ ಪ್ರಧಾನಿ ಮೋದಿ, ಕಮಲ‌ ಅವರ ಸಾಧನೆ ಭಾರತೀಯರು ಹೆಮ್ಮೆ ಪಡುವಂತಹ ವಿಷಯ. ಆಕೆ ಭಾರತದ ಮಹಿಳೆ ಎಂದು ಗುಣಗಾನ‌ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯ 5 ದಿನಗಳ ಅಮೆರಿಕಾ ಪ್ರವಾಸದಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿದ್ದಾರೆ. ಈ ಬಾರಿಯ ಮೋದಿ ಪ್ರವಾಸದಿಂದ ಅಮೆರಿಕಾ ಜೊತೆಗಿನ ಸ್ನೇಹ – ಬಾಂಧವ್ಯ ಇನ್ನಷ್ಟು ಇಮ್ಮಡಿಯಾಗಿದೆ.

Share This Article
Leave a comment