December 20, 2024

Newsnap Kannada

The World at your finger tips!

dance,youth,burkha

Another controversy in the state: Burkha dance by youth in Madikeri - Video goes viral

ರಾಜ್ಯದಲ್ಲಿಮತ್ತೊಂದು ವಿವಾದ : ಮಡಿಕೇರಿಯಲ್ಲಿ ಯುವಕರಿಂದ ಬುರ್ಖಾ ಡ್ಯಾನ್ಸ್ – ವೀಡಿಯೋ ವೈರಲ್

Spread the love

ಕೊಡಗಿನ ಗ್ರಾಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಲಾದ ಬುರ್ಖಾ ಡ್ಯಾನ್ ವಿವಾದಕ್ಕೆ ಕಾರಣವಾಗಿದೆ.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ಓದಿ -UPSC ಸಿವಿಲ್ಸ್​-2021 ಫೈನಲ್ ಫಲಿತಾಂಶ; ಟಾಪ್​​ ಮೂರು ಸ್ಥಾನ ಮಹಿಳೆಯರದ್ದೆ- ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದಲ್ಲಿರುವಂತ ಕೊಳಕೇರಿ ಗ್ರಾಮದಲ್ಲಿ, ಮೇ.28 ಮತ್ತು 29ರಂದು ಗ್ರಾಮಾಭಿವೃದ್ಧಿ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ಆಯೋಚಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಧರಿಸಿ, ಸ್ಟೇಜ್ ಮೇಲೆ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ್ದರು. ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋ ನೋಡಿದಂತ ಅನೇಕ ಮುಸ್ಲೀಂ ಸಮುದಾಯದ ಮುಖಂಡರು, ಯುವಕರು ಬುರ್ಖಾ ಹಾಕಿಕೊಂಡು ನೃತ್ಯ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಜೊತೆಗೆ ಇದೊಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಪಶ್ಚಿಮ ಕೊಳಗೇರಿ ಗ್ರಾಮಾಭಿವೃದ್ಧಿ ಸಂಘದ ಮುಖಂಡರು ಈ ಕುರಿತು ವಿವರಣೆ ನೀಡಿ , ಇದು ಯಾವುದೇ ಸಮುದಾಯ, ಧರ್ಮವನ್ನು ನಿಂದಿಸಲು, ಅಪಮಾನಿಸಲು ಮಾಡಿದಂತ ನೃತ್ಯವಾಗಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಕೆಲ ಹುಡುಗರು ಮನರಂಜನೆಗಾಗಿ ಬುರ್ಖಾ ಧರಿಸಿ, ನೃತ್ಯ ಮಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!