ಮಂಡ್ಯದಲ್ಲಿ ವಿಪ್ರರ ಕಾರ್ಯಕ್ರಮ : ವಿಪ್ರ ಮಕ್ಕಳಿಗೆ ಅಗತ್ಯವಿದ್ಯಾಭ್ಯಾಸ ಕೊಡಿಸಿ – ಸಚ್ಚಿದಾನಂದ ಮೂರ್ತಿ ಕರೆ

Team Newsnap
1 Min Read

ಮಂಡ್ಯ – ವಿಪ್ರ ಮಕ್ಕಳು ತಮ್ಮ ಬುದ್ದಿ ಶಕ್ತಿಯ ಮೇಲೆ ಜೀವನವನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವಿಪ್ರ ಬಂಧುಗಳು ತಮ್ಮ ಮಕ್ಕಳಿಗೆ. ಅಗತ್ಯವಾದ ಶಿಕ್ಷಣ ಕೊಡಿಸಿ ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕರೆ ನೀಡಿದರು.

ಇದನ್ನು ಓದಿ – UPSC ಸಿವಿಲ್ಸ್​-2021 ಫೈನಲ್ ಫಲಿತಾಂಶ; ಟಾಪ್​​ ಮೂರು ಸ್ಥಾನ ಮಹಿಳೆಯರದ್ದೆ- ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ

ಮಂಡ್ಯದ ಸೇವಾ ಕಿರಣ ವೃದ್ಧಾಶ್ರಮದ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಬ್ರಾಹ್ಮಣ ರ ಬಳಗ ಹಾಗೂ .ಮಂಡ್ಯ ಜಿಲ್ಲಾ ವಿಪ್ರ ಬಳಗ ಆಯೋಜಿಸಿದ್ದ ಬಳಗದ ಸದಸ್ಯರಿಗೆ ಸಂತೋಷಕೂಟ ಹಾಗೂ ವಿವಿಧ ಸಾಂಸ್ಕೃತಿಕ ,ಸ್ಪರ್ಧೆ. ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಾಹ್ಮಣ ಜನಾಂಗದವರ ಸ್ಥಿತಿ ಆರ್ಥಿಕವಾಗಿ, ಸಾಮಾಜಿಕ ವಾಗಿ ಬಹಳ ಶೋಚನೀಯ ಸ್ಥಿತಿಗೆ ತಲುಪಿದೆ. ಅದರೆ ಅದನ್ನೆಲ್ಲವನ್ನು ಮೆಟ್ಟಿ ನಿಂತು ಎಲ್ಲರೂ ಒಗ್ಗಟ್ಟಾಗಿ ಉಪ ಪಂಗಡಗಳ ಅಹಂ ನ್ನು ಕೊನೆಗೊಳಿಸಿ ವಿದ್ಯೆ ಬಲದಿಂದ ಮುನ್ನೆಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ವೀರ ಸಾವರ್ಕರ್. ಚಂದ್ರಶೇಖರ ಅಜಾದ್. ತಿಲಕರು. ಪಟೇಲರು ಅಗ್ರಗಣ್ಯ ರಾಗಿದ್ದಾರೆ ಎಂದು ಅಭಿಮಾನದಿಂದ ಸಚ್ಚಿದಾನಂದ ಮೂರ್ತಿ ಹೇಳಿದರು

ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆ ಗೆ, ಸ್ವಯಂ ಉದ್ಯೋಗಕ್ಕೆ ಪೂರಕವಾಗಿ ಅಗತ್ಯ ಸಹಾಯ ಹಸ್ತ ನೀಡಲಿದೆ ಎಂದರು.

Share This Article
Leave a comment