‘ಕೇಂದ್ರ ವೇತನ ಮಾದರಿ’ ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ : ಇದೇ ವರ್ಷ ಜಾರಿ – CM ಬೊಮ್ಮಾಯಿ ಘೋಷಣೆ

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಮಾದರಿ ಜಾರಿ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು – 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಆ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು.ನಿಮ್ಮ ಆರೋಗ್ಯ ಮುಖ್ಯ. ಸರ್ಕಾರಿ ನೌಕರರ ಆರೋಗ್ಯ ಚೆನ್ನಾಗಿದ್ದರೇ ಉತ್ತಮ ಸೇವೆ ನೀಡಲು ಸಾಧ್ಯ.

ಇದನ್ನು ಓದಿ UPSC ಸಿವಿಲ್ಸ್​-2021 ಫೈನಲ್ ಫಲಿತಾಂಶ; ಟಾಪ್​​ ಮೂರು ಸ್ಥಾನ ಮಹಿಳೆಯರದ್ದೆ- ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ

ನಾನು ಭಾಷಣದ ವೇಳೆ ಬಜೆಟ್ ಗೆ ಉತ್ತರಿಸುವಾಗ ಯಡಿಯೂರಪ್ಪ ಒಂದು ಚೀಟಿ ಕಳುಹಿಸಿದರು. ಕೇಂದ್ರ ವೇತನ ಆಯೋಗವನ್ನು ಇವತ್ತೇ ಘೋಷಣೆ ಮಾಡಬೇಕು ಎಂದು ಸೂಚಿಸಿದ್ದರು. ಆ ಹಿನ್ನಲೆಯಲ್ಲಿಯೇ ಈ ವರ್ಷದಲ್ಲಿ ವೇತನ ಆಯೋಗ ರಚಿಸಿ, ವೇತನ ತಾರತಮ್ಯ ನಿವಾರಿಸುತ್ತೇವೆ ಎಂದರು.

Share This Article
Leave a comment