ಬೂಕನಕೆರೆ ಸ್ಮರಿಸಿದ ಬಿ. ಎಸ್ .ವೈ- ಬಿಜೆಪಿ ಅಧಿಕಾರಕ್ಕೆ ತರುವೆ

Team Newsnap
1 Min Read

ನನ್ನ ತಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ, 4 ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ, ಇನ್ಯಾವುದೇ ಯಾವುದೇ ಅಪೇಕ್ಷೆಗಳಿಲ್ಲ ಎಂದು ಬೂಕನಕೆರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು.

ಕೆಆರ್ ಪೇಟೆ ಬೂಕನಕೆರೆಯಲ್ಲಿ ನಡೆಯುವ ವರ್ಷಕ್ಕೊಮ್ಮೆ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಇರುತ್ತದೆ. ನಾನು ಕೂಡ ಕುಟುಂಬಸ್ಥರೊಂದಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಇದು ಅನೇಕ ವರ್ಷಗಳ ಪದ್ದತಿ, ಅದರಂತೆ ಇಂದು ಕೂಡ ಬಂದಿದ್ದೇನೆ ಎಂದರು.

ನಾನು ಹುಟ್ಟೂರಿಗೆ ಬಂದಾಗಲೆಲ್ಲಾ ನನಗೆ ಸಂತೋಷ, ತೃಪ್ತಿ, ನೆಮ್ಮದಿ ಸಿಗುತ್ತದೆ . ನಾನು ಹುಟ್ಟಿ ಬೆಳೆದದ್ದು ಬೂಕನಕೆರೆಯಲ್ಲಿ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡೆ. ತಂದೆಯವರೆ ನಮ್ಮನ್ನೆಲ್ಲಾ‌ ಸಾಕಿದರು.
ಬೂಕನಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಂಡ್ಯಕ್ಕೆ ತೆರಳಿದೆ. ಮಂಡ್ಯದಲ್ಲಿ ಹೈ ಸ್ಕೂಲ್ ಮುಗಿಸಿ ಬೆಂಗಳೂರಿಗೆ ಹೋದೆವು. ಬೂಕನಕೆರೆಯನ್ನು ಜೀವನದಲ್ಲಿ ಎಂದಿಗೂ ಮರೆಯಲಾಗಲ್ಲ ಎಂದು ಹಳೇ ದಿನಗಳನ್ನು ಸ್ಮರಿಸಿದರು.

ಈ ಮಣ್ಣಿನ ಗುಣದಿಂದ ಈ ಸ್ಥಾನಕ್ಕೆ ತಲುಪಿದ್ದೇನೆ. ಸಣ್ಣಪುಟ್ಟಕ್ಕೆ ಬಡಿದಾಡಬೇಡ ಒಳ್ಳೆಯ ಅವಕಾಶಗಳು ಸಿಗಲಿದೆ ಎಂದು ನನ್ನ ತಂದೆ ಭವಿಷ್ಯ ಹೇಳಿದ್ದರು. ನನ್ನ ತಂದೆ ಭವಿಷ್ಯ ನಿಜವಾಗಿದೆ, ನಾಲ್ಕು ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ, ಯಾವುದೇ ಅಪೇಕ್ಷೆಗಳಿಲ್ಲ. ಅವತ್ತಿನ‌ ಕಾಲದ ಹಬ್ಬದ ದಿನಗಳು ಈಗ ಇಲ್ಲ. ಆಗ ಜಾತ್ರೆಗೆ ಮನೆ ಮಂದಿಯೆಲ್ಲಾ ಹೋಗುತ್ತಿದ್ದೇವು. ನಾನು, ನಮ್ಮಣ್ಣ ತೆಂಡೆಕೆರೆ ಸಂತೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದೇವು. ಅದ್ಯಾವುದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು. ನಾಳೆಯಿಂದಲೇ ನಂದಿನಿ ಹಾಲು, ಮೊಸರಿನ ದರ 2 ರು ಏರಿಕೆ : ನೂತನ ಪರಿಷ್ಕೃತ ದರ ಹೀಗಿದೆ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೆ ನನ್ನ‌ ಮುಂದಿನ ಗುರಿ. ಆ ಗುರಿ ಮುಟ್ಟುವ ದಿಕ್ಕಿನಲ್ಲಿ ಪ್ರಯತ್ನ ಸಾಗಿದೆ ಎಂದರು.

Share This Article
Leave a comment