ಇದನ್ನು ಓದಿ -UPSC ಸಿವಿಲ್ಸ್-2021 ಫೈನಲ್ ಫಲಿತಾಂಶ; ಟಾಪ್ ಮೂರು ಸ್ಥಾನ ಮಹಿಳೆಯರದ್ದೆ- ರಾಜ್ಯದ 24 ಮಂದಿ ಆಯ್ಕೆ : ಪಟ್ಟಿ ನೋಡಿ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದಲ್ಲಿರುವಂತ ಕೊಳಕೇರಿ ಗ್ರಾಮದಲ್ಲಿ, ಮೇ.28 ಮತ್ತು 29ರಂದು ಗ್ರಾಮಾಭಿವೃದ್ಧಿ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ಆಯೋಚಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಧರಿಸಿ, ಸ್ಟೇಜ್ ಮೇಲೆ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ್ದರು. ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೋ ನೋಡಿದಂತ ಅನೇಕ ಮುಸ್ಲೀಂ ಸಮುದಾಯದ ಮುಖಂಡರು, ಯುವಕರು ಬುರ್ಖಾ ಹಾಕಿಕೊಂಡು ನೃತ್ಯ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜೊತೆಗೆ ಇದೊಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಪಶ್ಚಿಮ ಕೊಳಗೇರಿ ಗ್ರಾಮಾಭಿವೃದ್ಧಿ ಸಂಘದ ಮುಖಂಡರು ಈ ಕುರಿತು ವಿವರಣೆ ನೀಡಿ , ಇದು ಯಾವುದೇ ಸಮುದಾಯ, ಧರ್ಮವನ್ನು ನಿಂದಿಸಲು, ಅಪಮಾನಿಸಲು ಮಾಡಿದಂತ ನೃತ್ಯವಾಗಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಕೆಲ ಹುಡುಗರು ಮನರಂಜನೆಗಾಗಿ ಬುರ್ಖಾ ಧರಿಸಿ, ನೃತ್ಯ ಮಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು