ಕಲಾವತಿ ಪ್ರಕಾಶ್
ಬೆಂಗಳೂರು
ಬೆಟ್ಟದ ಮೇಲೆ ಕೋಟೆ ಕಟ್ಟಿ
ಆಳ್ವಿಕೆ ನಡೆಸಿದ ಚಾಲುಕ್ಯರು
ಕೋಟೆಯನ್ನು ಬಲಪಡಿಸಿದಂಥ
ಹೆಮ್ಮೆಯ ರಾಜರು ಯಾದವರು
ಬೆಟ್ಟ ಎಂದರೆ ಗಿರಿಯೆಂದರ್ಥ
ಆಳ್ವಿಕೆ ಮಾಡಿದರು ಯಾದವರು
ಗಿರಿಯ ಮೇಲಿನರಮನೆ ಆಳಿದ
ಯಾದವರಿಂದ ಯಾದಗಿರಿ ಈ ಊರು
ಬೆಟ್ಟದ ಮೇಲೆ ಸಿಡಿಲು ಬಡಿಯಲು
ಬಂಡೆಯೊಡೆದು ಆಯಿತು ಬಾವಿ
ಬರಗಾಲದಲ್ಲೂ ಬತ್ತದ ಒಣಗದ
ತಣ್ಣನೆ ಕೊರೆಯುವ ನೀರಿನ ಬಾವಿ
ಯಾದಗಿರಿಯನು ಕಲ್ಯಾಣ
ಕರುನಾಡ ಹೃದಯವೆಂದೆನ್ನುವರು
ಇದೇ ಜಿಲ್ಲೆಯ ಸುರಪುರವಾಳಿದ
ವೆಂಕಟಪ್ಪನೆಂಬ ರಾಜರು
ಹೆಮ್ಮೆಯ ನಾಡೊಳು ಕಳಚೂರಿ ಚಾಲುಕ್ಯ
ಪರ್ಶಿಯನ್ನರ ಶಾಸನ ಉಂಟು
ಕೃಷ್ಣಾ ನದಿಯ ಬಸವಸಾಗರ
ಜಲಾಶಯವೂ ಇಲ್ಲುಂಟು
ಕನ್ನಡ ನಾಡಿನ ಎರಡನೆ ದೊಡ್ಡ
ಪಕ್ಷಿ ಧಾಮವು ಬೋನಾಳ
ಸುಂದರ ಶಿಲ್ಪ ಕಲೆಯ ನಾಡಲಿ
ನೋಡಲು ಬನ್ನಿ ಕೋಟೆಗಳ
ದೈವ ಭಕ್ತಿಯಲಿ ವಿಶಿಷ್ಟವಾದ
ಊರೊಂದಿಹುದು ಮೈಲಾಪುರ
ಇಲ್ಲಿನ ಊರಿನ ಅಧಿದೇವತೆಯೆ
ಗುಹೆಯ ಮೈಲಾರ ಲಿಂಗೇಶ್ವರ
ಕೋಳಿ ಸಾಕರು ಮಂಚ ಬಳಸರು
ಕುದುರೆ ಏರರು ಮಡಕೆ ಮಾಡರು
ಗದ್ದುಗೆ ಮೇಲೆ ಮಲ್ಲಯ್ಯ ಕುಳಿತರೆ
ಮಂಚ ಬಳಸಲಾರರು ಈ ಭಕ್ತರೆ
ಶೂರ ವೀರರನು ಶರಣ ಭಕ್ತರನು
ಪಡೆದ ಜಿಲ್ಲೆಯು ಯಾದಗಿರಿ
ಕನ್ನಡ ನಾಡಿನ ಹೆಮ್ಮೆ ಇತಿಹಾಸಕೆ
ಹೆಸರುವಾಸಿ ಈ ಯಾದವಗಿರಿ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು