ಮೈಸೂರಲ್ಲಿ ಭೀಕರ ರಸ್ತೆ ಅಪಘಾತ: ‘ಬೈಕ್’ಗೆ ಬುಲೆರೋ ಡಿಕ್ಕಿ- ಇಬ್ಬರ ಸಾವು

Team Newsnap
0 Min Read

ಮೈಸೂರು: ಬೈಕ್ ಗೆ ಬುಲೆರೋ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರರಿಬ್ಬರೂ ಸಾವನ್ನಪ್ಪಿರುವ ಘಟನೆ ಜರುಗಿದೆ .

ಮೈಸೂರಿನ ಪೊಲೀಸ್ ಬಡಾವಣೆ ರಿಂಗ್ ರಸ್ತೆಯ ಸಮೀಪದಲ್ಲಿ ಬೈಕ್ ಗೆ ಹಿಂಬದಿಯಾಗಿ ಬುಲೆರೋ ಡಿಕ್ಕಿಯಾಗಿದೆ.

ಆ ಬಳಿಕ ಬೈಕ್ ಸವಾರನ ಮೇಲೆ ಬುಲೆರೋ ಹರಿದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಬ್ಬರು ಬೈಕ್ ಸವರರನ್ನು ಬಲಿ ಪಡೆದ ಬುಲೆರೋ ಚಾಲಕ ವಾಹನ ಸಹಿತ ಪರಾರಿಯಾಗಿದ್ದಾನೆ .ಚಿಕ್ಕಬಳ್ಳಾಪುರದಲ್ಲಿ ಮಾರಕ ಝಿಕಾ ವೈರಸ್‌ ಪತ್ತೆ

ಮೈಸೂರಿನ ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment