ಚಿಕ್ಕಬಳ್ಳಾಪುರದಲ್ಲಿ ಮಾರಕ ಝಿಕಾ ವೈರಸ್‌ ಪತ್ತೆ

Team Newsnap
1 Min Read

ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರುವುದಕ್ಕೆ ಕಂಡುಕೊಳ್ಳಲಾಗಿದೆ.

ಸಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ರ‍್ಯಾಂಡಮ್‌ ಚೆಕಪ್‌ ಮಾಡಲಾಗುತ್ತಿದ್ದು, ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ವಡ್ಡಹಳ್ಳಿ, ಬಚ್ಚಹಳ್ಳಿ ಗ್ರಾಮದ 880 ಮನೆಗಳಲ್ಲಿ ಸರಿಸುಮಾರು 4,800 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ.

ಝಿಕಾ ವೈರಸ್ : 

ಸೊಳ್ಳೆ ಕಡಿತದ ಮೂಲಕ ಝಿಕಾ ವೈರಸ್ ಸೋಂಕು ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ. ಈ ವೈರಸ್ ಅನ್ನು ಮೊದಲು 1947ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಕೇರಳದಲ್ಲಿ 2021ರಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು

ಝಿಕಾ ವೈರಸ್ ನಿವಾರಣಾ ಕ್ರಮವೇನು: 

ಈ ಸೋಂಕು ತಗುಲಿದವರಿಗೆ ಹೆಚ್ಚು ದ್ರವಾಹಾರ ಸೇವಿಸುವಂತೆ ತಿಳಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳದ ಆಹಾರ ಸೇವಿಸಲು ಸಲಹೆ ನೀಡಲಾಗಿದೆ.

ಝಿಕಾ ಸೋಂಕಿನ ಲಕ್ಷಣಗಳೇನು: 

ಸೋಂಕು ಅತಿ ಗಂಭೀರ ಸ್ವರೂಪ ತಾಳುವುದಿಲ್ಲ. ಈ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆಯೂ ಕಡಿಮೆ. ಎರಡು ದಿನಗಳಿಂದ ಏಳು ದಿನಗಳವರೆಗೆ ಈ ಲಕ್ಷಣಗಳು ಇರುತ್ತವೆ. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಬದಲಾಗಬೇಕಿರುವುದು ರಾಜ್ಯದ ಹೆಸರಲ್ಲ…. ನಿರಭಿಮಾನದ ಕೆಸರು…. 

ಕಣ್ಣು ಕೆಂಪಗಾಗುವುದು, ಜ್ವರ, ಗಂಟು ನೋವು, ಕೀಲು, ಸ್ನಾಯು ನೋವು ಇದರ ಸಾಮಾನ್ಯ ಲಕ್ಷಣ. ತಲೆನೋವು, ಕೆಂಪು ಕಲೆಗಳೂ ಆಗುತ್ತವೆ.

Share This Article
Leave a comment