ಲಂಚ ಸ್ವೀಕಾರ ಮಾಡಿದ ಅಧಿಕಾರಿಗೆ 8 ವರ್ಷ ಕಠಿಣ ಶಿಕ್ಷೆ , 20 ಸಾವಿರ ದಂಡ ವಿಧಿಸಿದ ನ್ಯಾಯಾಲಯ.

Team Newsnap
1 Min Read
court sentenced bribery officer to eight years imprisonment and a fine of Rs 20,000

2017 ಮೇ ನಲ್ಲಿ ಸಂಘವೊಂದರ ನೊಂದಣಿ ಮಾಡಲು ಸಹಕಾರ ಅಭಿವೃದ್ದಿ ಅಧಿಕಾರಿಯೊಬ್ಬರು 7500 ರು ಲಂಚ ಸ್ವೀಕಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆ ಅಧಿಕಾರಿಗೆ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ

ಇದನ್ನು ಓದಿ – ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಮತದಾನದ ವಿವರ

20ನೇ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ(ವಿಶೇಷ. ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ಕಾಯ್ದೆ) ನ್ಯಾಯಾಧೀಶ ಕೆ ಲಕ್ಷ್ಮೀ ನಾರಾಯಣ ಭಟ್ ವಿಚಾರಣೆ ನಡೆಸಿ, ಆರೋಪಿ ಅಧಿಕಾರಿ ಎಚ್ ಪಿ ಸದಾಶಿವ ವಿರುದ್ದ ಈ ತೀರ್ಪು ನೀಡಿದ್ದಾರೆ

ಪ್ರಕರಣದ ವಿವರ :

ಬೆಂಗಳೂರಿನ ನಗರದ ಯಲಹಂಕ ನಿವಾಸಿಯೊಬ್ಬರು. ತಮ್ಮ ಸ್ನೇಹಿತನ ಮುಖಾಂತರ ಕೋರಮಂಗಲದ ಧನುಷ್‌ಶ್ರೀ ಅಪಾರ್ಟಮೆಂಟ್‌ ಓನರ್ಸ್‌ ಅಸೋಸಿಯೇಷನ್ಸ್‌ ಹೆಸರಿನಲ್ಲಿ ಸಂಘವನ್ನು ತೆರೆಯಲು ನೋಂದಣಿ ಮಾಡುವ ಸಲುವಾಗಿ ಚಾಮರಾಜ ಪೇಟೆಯಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರು.

ಆರೋಪಿತ ಸರ್ಕಾರಿ ಅಧಿಕಾರಿಹೆಚ್‌. ಪಿ. ಸದಾಶಿವ. ಸಂಘವನ್ನು ನೋಂದಣಿ ಮಾಡಿಕೊಡುವ ಸಲುವಾಗಿ ಪಿರ್ಯಾದುದಾರರಿಗೆ 10,000 ರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟರು.

ಈ ಕುರಿತಂತೆ ಬೆ೦ಗಳೂರು ನಗರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿರುವ ದೂರು ನೀಡಿದ ನಂತರ ಲಂಚದ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

Share This Article
Leave a comment