ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಮತದಾನದ ವಿವರ : ಮಂಡ್ಯ ಶೇ.69.88- ಮೈಸೂರು – ಶೇ 67.92 – ಚಾ ನಗರ – ಶೇ 73.21 – ಹಾಸನ : ಶೇ 74 .22

Team Newsnap
2 Min Read

ದಕ್ಷಿಣ ಪದವೀದರ ಕ್ಷೇತ್ರ ವ್ಯಾಪ್ತಿಯ ಚುನಾವಣೆಯ ನಾಲ್ಕು ಜಿಲ್ಲೆಯಲ್ಲಿ ನಡೆದ ಮತದಾನದ ಶೇಕಡಾವಾರು ವಿವರ ಹೀಗಿದೆ

ಮಂಡ್ಯ ಶೇ.69.88- ಮೈಸೂರು – ಶೇ 67.92 – ಚಾ ನಗರ – ಶೇ 73.21 – ಹಾಸನ : ಶೇ 74 .22

ಮಂಡ್ಯ ಜಿಲ್ಲೆಯ ಸಮಗ್ರ ವಿವರ :

WhatsApp Image 2022 06 13 at 8.18.15 PM
WhatsApp Image 2022 06 13 at 8.19.25 PM
WhatsApp Image 2022 06 13 at 8.20.30 PM

ಕರ್ನಾಟಕ ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 19179 ಪುರುಷರು, 13873 ಮಹಿಳೆಯರು ಇತರರು ಒಬ್ಬರು ಸೇರಿದಂತೆ ಒಟ್ಟು 33,053 ಮತದಾರರು ಮತಚಲಾಯಿಸಿ ಶೇ. 69.88 ಮತದಾನವಾಗಿದೆ ಎಂದು ಕರ್ನಾಟಕ ದಕ್ಷಿಣ ಪದವೀದರ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಎಸ್. ಅಶ್ವತಿ ತಿಳಿಸಿದ್ದಾರೆ.

ಇದನ್ನು ಓದಿ –ಅಮೃತ ಬಳ್ಳಿ : ಔಷಧೀಯ ಗುಣವುಳ್ಳ : ಅಮೃತಕ್ಕೆ ಸಮಾನವಾದ ಗಿಡಮೂಲಿಕೆ

ತಾಲೂಕು ವಾರು ವಿವರ :

1) ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 2123 ಪುರುಷರು, 1203ಮಹಿಳೆಯರು ಒಟ್ಟು 3326 ಮತದಾರರಿದ್ದು, ಇವರ ಪೈಕಿ 1602 ಪುರುಷರು, 851 ಮಹಿಳೆಯರು ಒಟ್ಟು 2453 ಮತದಾರರು ಮತಚಲಾಯಿಸಿ ಶೇ. 73.75 ಮತದಾನವಾಗಿರುತ್ತದೆ.

2) ನಾಗಮಂಗಲ ತಾಲ್ಲೂಕಿನಲ್ಲಿ 1678 ಪುರುಷರು, 1281 ಮಹಿಳೆಯರು ಒಟ್ಟು 2959 ಮತದಾರರಿದ್ದು, ಇವರ ಪೈಕಿ 1264 ಪುರುಷರು, 933 ಮಹಿಳೆಯರು ಒಟ್ಟು 2197 ಮತದಾರರು ಮತಚಲಾಯಿಸಿ ಶೇ 74.25 ಮತದಾನವಾಗಿರುತ್ತದೆ.

3) ಪಾಂಡವಪುರ ತಾಲ್ಲೂಕಿನಲ್ಲಿ 2145 ಪುರುಷರು, 1560 ಮಹಿಳೆಯರು ಒಟ್ಟು 3705 ಮತದಾರರಿದ್ದು, ಇವರ ಪೈಕಿ 1696 ಪುರುಷರು, 1142 ಮಹಿಳೆಯರು ಒಟ್ಟು 2838 ಮತದಾರರು ಮತಚಲಾಯಿಸಿ ಶೇ. 76.60 ಮತದಾನವಾಗಿರುತ್ತದೆ.

4) ಮಂಡ್ಯ ತಾಲ್ಲೂಕಿನಲ್ಲಿ 8441 ಪುರುಷರು, 7479 ಮಹಿಳೆಯರು, ಇತರರು 05 ಸೇರಿದಂತೆ ಒಟ್ಟು 15,925 ಮತದಾರರಿದ್ದು, ಇವರ ಪೈಕಿ 5848 ಪುರುಷರು, 4719 ಮಹಿಳೆಯರು ಇತರರು01 ಒಟ್ಟು 10,568 ಮತದಾರರು ಮತಚಲಾಯಿಸಿ ಶೇ.66.36 ಮತದಾನವಾಗಿರುತ್ತದೆ.

5) ಮದ್ದೂರು ತಾಲ್ಲೂಕಿನಲ್ಲಿ 5586 ಪುರುಷರು, 4773 ಮಹಿಳೆಯರು, ಇತರರು 01 ಸೇರಿಂದತೆ ಒಟ್ಟು 10,360 ಮತದಾರರಿದ್ದು, ಇವರ ಪೈಕಿ 4216 ಪುರುಷರು, 3311 ಮಹಿಳೆಯರು ಒಟ್ಟು 7527 ಮತದಾರರು ಮತಚಲಾಯಿಸಿ ಶೇ.72.65 ಮತದಾನವಾಗಿರುತ್ತದೆ.

6) ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 1837 ಪುರುಷರು, 1468 ಮಹಿಳೆಯರು, ಇತರರು 02 ಸೇರಿದಂತೆ ಒಟ್ಟು 3307 ಮತದಾರರಿದ್ದು, ಇವರ ಪೈಕಿ 1352 ಪುರುಷರು,928 ಮಹಿಳೆಯರು ಒಟ್ಟು 2280 ಮತದಾರರು ಮತಚಲಾಯಿಸಿ ಶೇ68.94 ಮತದಾನವಾಗಿರುತ್ತದೆ.

7) ಮಳವಳ್ಳಿ ತಾಲ್ಲೂಕಿನಲ್ಲಿ 4623 ಪುರುಷರು, 3093 ಮಹಿಳೆಯರು, ಇತರರು 04 ಸೇರಿದಂತೆ ಒಟ್ಟು 7720 ಮತದಾರರಿದ್ದು, ಇವರ ಪೈಕಿ 3201 ಪುರುಷರು, 1989 ಮಹಿಳೆಯರು ಒಟ್ಟು 5190 ಮತದಾರರು ಮತಚಲಾಯಿಸಿ ಶೇ67.23 ಮತದಾನವಾಗಿರುತ್ತದೆ.

8) ಮಂಡ್ಯ ಜಿಲ್ಲೆಯಲ್ಲಿ ಒಟ್ಟಾರೆ 26433 ಪುರುಷರು, 20857 ಮಹಿಳೆಯರು, ಇತರರು12 ಸೇರಿದಂತೆ ಒಟ್ಟು 47302 ಮತದಾರರಿದ್ದು, ಇವರ ಪೈಕಿ 19179 ಪುರುಷರು, 13873 ಮಹಿಳೆಯರು ಇತರರು 01 ಒಟ್ಟು 33053 ಮತದಾರರು ಮತಚಲಾಯಿಸಿ ಶೇ.69.88 ಮತದಾನವಾಗಿರುತ್ತದೆ. ಮತ ಏಣಿಕೆಯು ಜೂನ್ 15 ರಂದು ನಡೆಯಲಿದೆ.

Share This Article
Leave a comment