ಚಾಲಕನ ಮೂಲಕ ಲಂಚ ವಸೂಲಿ : ಕಾನೂನು ಮಾಪನ ಶಾಸ್ತ್ರ ಅಧಿಕಾರಿ ಸೀಮಾ ಸಸ್ಪೆಂಡ್

Team Newsnap
1 Min Read

ಬೆಂಗಳೂರಿನ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಚಾಲಕನ ಮೂಲಕದ ಲಂಚದ ಹಣ ಪಡೆದಿದ್ದ ಆರೋಪದ ಮೇಲೆ ಸೀಮಾ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ಸೀಮಾ ಕೆ. ಮ್ಯಾಗಿ ತನ್ನ ಏಜೆಂಟ್ ಶಿವಕುಮಾರ್ ಜೊತೆ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಫ್ತಾ ವಸೂಲಿ ಮಾಡುತ್ತಿದ್ದ ಬಗ್ಗೆ ವಿಡಿಯೋ ದೃಶ್ಯಗಳ ಸಾಕ್ಷಿ ಸಿಕ್ಕಿದ್ದರಿಂದ ಅಧಿಕಾರಿಯ ಅಸಲಿ ಮುಖ ಬಟಾ ಬದಲಾಗಿತ್ತು.

ಲಂಚ ಪಡೆದ ಹಣ ಡೈರಿಯಲ್ಲಿ ದಾಖಲು :

ಸೀಮಾ ತಾವು ಪಡೆದ ಲಂಚದ ಬಗ್ಗೆ ಸಮಗ್ರ ಮಾಹಿತಿಯನ್ನು ಡೈರಿಯಲ್ಲಿ ಬರೆಯುತ್ತಿದ್ದರು. ಅವರ ಚಾಲಕ ಒಂದು ಡೈರಿಯಲ್ಲಿ ಹಣ ನೀಡಿದ್ದಾಗಿ ಪೆಟ್ರೋಲ್ ಬಂಕ್ ನವರ ಸಹಿ ಮತ್ತು ಸೀಲ್ ಕೂಡ ಪಡೆದುಕೊಳ್ಳುತ್ತಿದ್ದ.

ಈ ವೇಳೆ ಸೀಮಾ ಅವರಿಗೆ ಬ್ರೋಕರ್ ಶಿವಕುಮಾರ್ ಕೂಡ ಸಾಥ್ ಕೊಟ್ಟಿದ್ದ. ತನ್ನನ್ನ ತಾನು ಇಲಾಖೆಯ ಇನ್ಸ್​​ಪೆಕ್ಟರ್ ಅಂತಾ ಹೇಳಿಕೊಳ್ಳುತ್ತಿದ್ದ ಆತ, ಹಫ್ತಾ ವಸೂಲಿ ಮಾಡಲು ಸಹಕಾರ ನೀಡುತ್ತಿದ್ದ.
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸೀಮಾ ಕೆ. ಮ್ಯಾಗಿಗೆ ಇಲಾಖೆ ನೋಟಿಸ್​ ಜಾರಿ ಮಾಡಿ ಉತ್ತರಿಸಲು ಹೇಳಿತ್ತು.

ಆದರೆ ನೋಟಿಸ್​ ಸರಿಯಾಗಿ ಉತ್ತರ‌ ನೀಡಲು ಸೀಮಾ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ಸೆಕ್ಷನ್ 10(ಡಿ) ಅಡಿಯಲ್ಲಿ ಅಮಾನತು ಮಾಡಿ ಇಲಾಖೆ ಆದೇಶ ನೀಡಿದೆ.

ಸೀಮಾ ಮ್ಯಾಗಿ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶ ನೀಡಲಾಗಿದೆ. ಆದೇಶದಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.

Share This Article
Leave a comment