March 29, 2023

Newsnap Kannada

The World at your finger tips!

politics , election , news

Brahmins have given samskara to this country :D C Tammanna ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ

ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ :ಡಿ ಸಿ ತಮ್ಮಣ್ಣ

Spread the love

ಬ್ರಾಹ್ಮಣತ್ವವನ್ನು ಯಾರು ಪಾಲಿಸುತ್ತಾರೋ ಅವರೇ ನಿಜ ಬ್ರಾಹ್ಮಣರು ಎಂದು ಶಾಸಕ ಡಿ.ಸಿ ತಮ್ಮಣ್ಣ ಹೇಳಿದರು.

ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ತಮ್ಮಣ್ಣ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯಾವುದೇ ಜಾತಿಯ ಬಗ್ಗೆ ಹೀನಾಯವಾಗಿ ಮಾತಾಡಬಾರದು ಎಂದರು
ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ.ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ


ಉತ್ತಮ ಗುಣಗಳನ್ನು ರೂಢಿಸಿಕೊಂಡು ಬ್ರಾಹ್ಮಣತ್ವ ಪಡೆದವರು.ಯಾವ ಜಾತಿಗೆ ಸೇರಿದ್ದರೂ ಆತ ಬ್ರಾಹ್ಮಣ ಎಂದು ಹೇಳಿದರು

ಬ್ರಾಹ್ಮಣತ್ವ ಬೇರೆ ಬ್ರಾಹ್ಮಣ ಜಾತಿಯೇ ಬೇರೆ. ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು

ಇನ್ನು ನಾನಂತೂ ಬ್ರಾಹ್ಮಣರ ವಿರೋಧಿ ಅಲ್ವೇ ಅಲ್ಲ. ಜಾತಿ ವಿಚಾರಗಳ ಬಗ್ಗೆ ನಾವು ಕಡಿಮೆ ಮಾತನಾಡಬೇಕು. ನಾನು ಬ್ರಾಹ್ಮಣರ ಸಂಸ್ಕೃತಿಯನ್ನು ಬಹಳ ಇಷ್ಟಪಡುತ್ತೇನೆ. ಬ್ರಾಹ್ಮಣತ್ವವನ್ನು ಯಾರು ಪಾಲಿಸುತ್ತಾರೋ ಅವರೇ ಬ್ರಾಹ್ಮಣರು ಎಂದರು.

error: Content is protected !!