March 29, 2023

Newsnap Kannada

The World at your finger tips!

WhatsApp Image 2023 02 07 at 3.47.40 PM

ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ

Spread the love

ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರು ಮತ್ತು ವಿಮರ್ಶಕರು, ಕವಿಗಳಾಗಿ ಪ್ರಸಿದ್ದಿಯಾಗಿದ್ದಾರೆ. ಕನ್ನಡದ ಹೆಸರಾಂತ ಕವಿ, ಬರಹಗಾರ ಮತ್ತು ಸಂಶೋಧಕರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಅತಿ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ.

ರಾಷ್ಟ್ರಕವಿಯಾದ ಜಿ ಎಸ್‌ ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರ ಶಿವರುದ್ರಪ್ಪ ,1926 ನೇ ಇಸವಿ ಫೆಬ್ರವರಿ 7ನೇ ತಾರೀಖು ಶಿವಮೊಗ್ಗ ಜಿಲ್ಲೆಯ “ ಶಿಕಾರಿಪುರ ತಾಲ್ಲೂಕಿನ ಈಸೂರು” ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕರಾಗಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕಾರಿಪುರದಲ್ಲಿ, ಅವರು ಮೂರು ಬಾರಿ ಚಿನ್ನದ ಪದಕಗಳನ್ನು ಪಡೆದರು. ಜಿ ಎಸ್‌ ಶಿವರುದ್ರಪ್ಪ ಅವರು ಕುವೆಂಪು ಅವರ ವಿದ್ಯಾರ್ಥಿ ಮತ್ತು ಅನುಯಾಯಿಯಾಗಿದ್ದರು, ಕುವೆಂಪು ಅವರ ಸಾಹಿತ್ಯ ಕೃತಿಗಳು ಮತ್ತು ಜೀವನದಿಂದ ಹೆಚ್ಚು ಪ್ರೇರಿತರಾಗಿದ್ದರು.

1966ರಲ್ಲಿ ಶಿವರುದ್ರಪ್ಪ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ನಂತರ ಅವರು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಆಯ್ಕೆಯಾದರು, ದಾವಣಗೆರೆ, ಶಿವಮೊಗ್ಗ, ಮೈಸೂರು ಮುಂತಾದ ಕಡೆ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1986 ರಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದರು. 1987–90ರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.

2006 ರ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ದಿನದಂದು ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಶಿವರುದ್ರಪ್ಪ ಅವರಿಗೆ “ರಾಷ್ಟ್ರದ ಕವಿ” ಬಿರುದನ್ನು ನೀಡಿ ಗೌರವಿಸಿತು. ಗೋವಿಂದ ಪೈ ಮತ್ತು ಕುವೆಂಪು ಅವರ ನಂತರ ಈ ಪ್ರತಿಷ್ಠಿತ ರಾಷ್ಟ್ರಕವಿ ಬಿರುದನ್ನು ಪಡೆದ ಮೂರನೇ ಕನ್ನಡ ಕವಿ ಜಿ ಎಸ್‌ ಶಿವರುದ್ರಪ್ಪನವರಾಗಿದ್ದಾರೆ. ಕನ್ನಡ ನಾಡು ನುಡಿಗೆ ಕವಿಗಳ ಸಾಹಿತ್ಯದ ಕೊಡುಗೆ

‘ಸಾಮಗಾನ’, ‘ಪ್ರೀತಿ ಇಲ್ಲದ ಮೇಲೆ’, ‘ಕಾರ್ತೀಕ’, ‘ದೀಪದಹೆಜ್ಜೆ’, ‘ದೇವಶಿಲ್ಪಿ’ ‘ಚೆಲುವು ಒಲವು’, ‘ವಿಮರ್ಶೆಯ ಪೂರ್ವ ಪಶ್ಚಿಮ’, ‘ಸೌಂರ‍್ಯ ಸಮೀಕ್ಷೆ’, ‘ಕಾವ್ಯಾರ್ಥ ಚಿಂತನ’, ‘ಗಂಗೆಯ ಶಿಖರದಲ್ಲಿ’ ಮೊದಲಾದವು ಇವರ ಪ್ರಮುಖ ಕೃತಿಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಜಿ.ಎಸ್.ಶಿವರುದ್ರಪ್ಪ ರವರ ಭಾವಗೀತೆಗಳು

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ ಕಡಲೊಳು
ಕೂಡಬಲ್ಲೆನೆ ಒಂದು ದಿನ .

ಹಾಡು…ಹಾಡು …ಹಾಡು ಹಳೆಯದಾದರೇನು ಭಾವ ನವನವೀನ..ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ….

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆನಾಲ್ಕು ಹನಿಯ ಚೆಲ್ಲಿದಿನದಿನವು ಕಾದು ಬಾಯಾರಿ ಬೆಂದೆಬೆಂಗದಿರ ತಾಪದಲ್ಲಿ .

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ.

ಎದೆತುಂಬಿ ಹಾಡಿದೆನು ಅಂದು ನಾನು,ಮನವಿಟ್ಟು ಕೇಳಿದಿರಿ ಅಲ್ಲಿ ನೀವು.

ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.

ಜಿ ಎಸ್‌ ಶಿವರುದ್ರಪ್ಪನವರು 23 ಡಿಸೆಂಬರ್ 2013 ರಂದು ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ನಿಧನರಾದರು.

error: Content is protected !!