ನಿಫಾ ವೈರಸ್ ಗೆ ಕೋಯಿಕ್ಕೋಡ್ ಲ್ಲಿ ಬಾಲಕ‌ ಬಲಿ

Team Newsnap
1 Min Read

ನಿಫಾ ವೈರಸ್ ಲಕ್ಷಣ ಹೊಂದಿ, ಕೇರಳದ ಕೋಯಿಕ್ಕೋಡ್ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕ ಭಾನುವಾರ ಸಾವನ್ನಪ್ಪಿದನು.‌

ಚತಮಂಗಲಂ ಪಂಚಾಯತ್‌ನ ಚೂಲೂರಿನ ಈ ಬಾಲಕ ಸೆಪ್ಟೆಂಬರ್ 1 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.

ಆತನ ಕಫ , ರಕ್ತದ ಮಾದರಿಗಳನ್ನು ಪುಣೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ನಿಪಾ ವೈರಸ್ ಇರುವುದು ದೃಡವಾಗಿತ್ತು.

ನಿಪಾಹ್ ಸೋಂಕಿನ ಮಾಹಿತಿಯ ನಂತರ ರಾಜ್ಯ ಸರ್ಕಾರ ಶನಿವಾರ ತಡರಾತ್ರಿ ಆರೋಗ್ಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯ ನಂತರ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಮೃತರ ಪ್ರಾಥಮಿಕ ಸಂಪರ್ಕದ ಪಟ್ಟಿಯಲ್ಲಿರುವವರಿಗೆ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ. ಆದರೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಬಾಲಕನಿಗೆ ಮೂರು ಮಾದರಿಗಳು ಇದ್ದವು – ಪ್ಲಾಸ್ಮಾ, ಸಿಎಸ್‌ಎಫ್ ಮತ್ತು ಸೀರಮ್- ಸೋಂಕಿತವೆಂದು ಕಂಡುಬಂದಿದೆ. ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಶನಿವಾರ, ಅವನ ಸ್ಥಿತಿ ಹದಗೆಟ್ಟಿತು. ಹಿಂದಿನ ದಿನ ನಾವು ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಸಚಿವರು ಹೇಳಿದರು.

ನೆರೆಯ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳು ಜಾಗರೂಕರಾಗಿರಬೇಕು ಎಂದು ಜಾರ್ಜ್ ಹೇಳಿದರು.

Share This Article
Leave a comment