September 21, 2021

Newsnap Kannada

The World at your finger tips!

ಇಬ್ಬರು ಯುವತಿಯರಿಗೆ ಪ್ರೇಮ‌ ಪಾಠ ಹೇಳಿದ ಯುವಕ ಒಬ್ಬಳಿಗೆ ತಾಳಿ ಕಟ್ಟಿದ …..

Spread the love

ಹಾಸನದ ಸಕಲೇಶಪುರದ ತ್ರಿಕೋನ ಪ್ರೇಮ ಪ್ರಕರಣ ಸುಖಾಂತ್ಯ ಕಂಡಿದೆ.

ಸಕಲೇಶಪುರ ಮೂಲದ ಯುವಕ ಇಬ್ಬರ ಯುವತಿಯರನ್ನು ಪ್ರೀತಿಸಿದ್ದನಂತೆ. ತಾನು ಇಬ್ಬರನ್ನು ಪ್ರೀತಿಸುತ್ತಿರುವ ವಿಚಾರ ತನ್ನ ಪ್ರಿಯತಮೆಯರಿಗೆ ಗೊತ್ತಾಗದ ರೀತಿಯಲ್ಲಿ ನಾಟಕವಾಡಿಕೊಂಡು ಬಂದಿದ್ದಾನೆ.‌

ಕೊನೆಗೆ ತಮ್ಮನ್ನು ಮದುವೆಯಾಗುವಂತೆ ಇಬ್ಬರೂ ಯುವತಿಯರು ಯುವಕನ ಬೆನ್ನು ಬಿದ್ದಿದ್ದಾರೆ.

ಈ ವೇಳೆ ಯುವಕ ಇಬ್ಬರನ್ನು ಪ್ರೀತಿಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾರೆ. ಓರ್ವ ಯುವತಿಯಂತೂ ವಿಷ ಸೇವಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ತ್ರಿಕೋನ ಪ್ರೇಮಕಥೆಯ ಬಗ್ಗೆ ತಿಳಿದ ಪರಿಚಯಸ್ಥರು ಹಾಗೂ ಸಂಬಂಧಿಕರು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಕೊನೆಗೆ ಲಾಟರಿ ಎತ್ತಲು ಮುಂದಾಗಿದ್ದಾರೆ.

ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಜೊತೆ ಮದುವೆ ಎಂದು ನಿರ್ಧಾರ ಮಾಡಿದ್ದಾರೆ.

ಇತ್ತ ಲಾಟರಿ ಎತ್ತಲು ಮುಂದಾಗುತ್ತಿದ್ದಂತೆಯೇ ಯುವಕ ವಿಷ ಸೇವಿಸಿದ್ದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಕೊನೆಗೆ ಹಿರಿಯರೆಲ್ಲೂ ಸೇರಿ ಯುವಕ ಹಾಗೂ ವಿಷ ಸೇವಿಸಿದ್ದ ಯುವತಿಗೆ ಮದುವೆ ಮಾಡಿಸಿ ಪ್ರಕರಣಕ್ಕೆ ತೆರೆ ಎಳೆದರು.

ಆದರೆ ಈ ಪ್ರೀತಿ ತ್ಯಾಗ ಮಾಡಿದ ಯುವತಿ, ಛಾಲೆಂಜ್ ಮಾಡಿದ್ದಾಳೆ.‌
ನಿನಗಿಂತಲೂ ಚೆನ್ನಾಗಿ ಬದುಕಿ ತೋರಿಸ್ತೀನಿ.‌ನಾನು ನೀನು ಫ್ರೆಂಡ್ಸ್ ಆಗಿಯೇ ಇರೋಣ ಎಂದು ಹೇಳಿದ್ದಾಳೆ.

error: Content is protected !!