ತಿರುಮಲದಲ್ಲಿ ಬಂಡೆಗಲ್ಲು ಉರುಳಿಬಿದ್ದು ರಸ್ತೆಗೆ ಹಾನಿ: ತಿಮ್ಮಪ್ಪನ ದಶ೯ನ ಬಂದ್

Team Newsnap
1 Min Read

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಿರುಪತಿಯಿಂದ ತಿರುಮಲಕ್ಕೆ ಹೋಗುವ ರಸ್ತೆ ಮೇಲೆ ಬಂಡೆಗಲ್ಲು ಉರುಳಿ ಬಿದ್ದಿದೆ.

ರಸ್ತೆಗೆ ಸಂಪೂರ್ಣ ಹಾನಿಯಾಗಿದೆ, ತಾತ್ಕಾಲಿಕವಾಗಿ ತಿರುಪತಿ ತಿಮ್ಮಪನ ದರ್ಶನ ರದ್ದಾಗಿದೆ.

​ತಿರುಮಲಕ್ಕೆ ಹೋಗುವ ಎರಡನೇ ಘಾಟ್ ರಸ್ತೆಯಲ್ಲಿ ಅಂದರೆ ತಿಮ್ಮಪ್ಪ ದೇಗಲದಿಂದ ಸುಮಾರು 16ನೇ ಕಿ.ಮೀ ದೂರದಲ್ಲಿ ಭೂಕುಸಿತ ಉಂಟಾಗಿದೆ.

ಮಳೆಯಿಂದಾಗಿ ಬೃಹತ್ ಕಲ್ಲುಬಂಡೆಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕುಸಿತಗೊಂಡಿದೆ. ಮೂರು ಕಡೆ ರಸ್ತೆ ಭಾಗಶಃ ಹಾಳಾಗಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಕುಸಿತಗೊಂಡಿದೆ ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಎರಡನೇ ಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ.

ಜೊತೆಗೆ ವಾಹನಗಳು ಮೊದಲ ಘಾಟ್​ ಮೂಲಕ ತಿಮ್ಮಪ್ಪನ ಸನ್ನಿಧಿಗೆ ಬರುವಂತೆ ಸೂಚಿಸಲಾಗಿದೆ.

Share This Article
Leave a comment