ರಸ್ತೆಗೆ ಸಂಪೂರ್ಣ ಹಾನಿಯಾಗಿದೆ, ತಾತ್ಕಾಲಿಕವಾಗಿ ತಿರುಪತಿ ತಿಮ್ಮಪನ ದರ್ಶನ ರದ್ದಾಗಿದೆ.
ತಿರುಮಲಕ್ಕೆ ಹೋಗುವ ಎರಡನೇ ಘಾಟ್ ರಸ್ತೆಯಲ್ಲಿ ಅಂದರೆ ತಿಮ್ಮಪ್ಪ ದೇಗಲದಿಂದ ಸುಮಾರು 16ನೇ ಕಿ.ಮೀ ದೂರದಲ್ಲಿ ಭೂಕುಸಿತ ಉಂಟಾಗಿದೆ.
ಮಳೆಯಿಂದಾಗಿ ಬೃಹತ್ ಕಲ್ಲುಬಂಡೆಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕುಸಿತಗೊಂಡಿದೆ. ಮೂರು ಕಡೆ ರಸ್ತೆ ಭಾಗಶಃ ಹಾಳಾಗಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆ ಕುಸಿತಗೊಂಡಿದೆ ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಎರಡನೇ ಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ.
ಜೊತೆಗೆ ವಾಹನಗಳು ಮೊದಲ ಘಾಟ್ ಮೂಲಕ ತಿಮ್ಮಪ್ಪನ ಸನ್ನಿಧಿಗೆ ಬರುವಂತೆ ಸೂಚಿಸಲಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ