‘ಲೋಕಾ ‘ಚುನಾವಣೆ ವೇಳೆಗೆ ಜೆಡಿಎಸ್ – ಬಿಜೆಪಿ ಮೈತ್ರಿಗೆ ವೇದಿಕೆ ಸಜ್ಜು – ಬೊಮ್ಮಾಯಿ

Team Newsnap
1 Min Read
Bommai sets stage for JDS-BJP alliance during 'Loka' elections 'ಲೋಕಾ 'ಚುನಾವಣೆ ವೇಳೆಗೆ ಜೆಡಿಎಸ್ - ಬಿಜೆಪಿ ಮೈತ್ರಿಗೆ ವೇದಿಕೆ ಸಜ್ಜು - ಬೊಮ್ಮಾಯಿ

ಹುಬ್ಬಳ್ಳಿ : ಕರ್ನಾಟಕ ರಾಜಕೀಯ ಅಂಗಳದಲ್ಲಿ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಚರ್ಚೆ ನಾಂದಿಯಾಗಿದೆ.

ಜುಲೈ 18ರಂದು ದೆಹಲಿಯಲ್ಲಿ ಎನ್ ಡಿಎ ಸಭೆ ಇದೆ . ಅದಕ್ಕೂ ಮುನ್ನವೇ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಬಂದಿದೆ.

2024ರ ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ-ಜೆಡಿಎಸ್ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ.

ಈ ಮಾಹಿತಿಗೆ ಪೂರಕವಾಗಿ ಭಾನುವಾರ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿ ಮೈತ್ರಿ ಕುರಿತಂತೆ ಮಾತುಕತೆಗಳ ಚಾಲನೆಯಾಗಿವೆ ಎಂದಿದ್ದಾರೆ.

ನಮ್ಮ ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರಾದ ದೇವೇಗೌಡರ ನಡುವೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಕುಮಾರಸ್ವಾಮಿಯವರು ಕೂಡ ಕೆಲವು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆ ದಿಕ್ಕಿನಲ್ಲಿ ಮಾತುಕತೆ ಮುಂದುವರಿಯುತ್ತದೆ. ಮಾತುಕತೆಯ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಯಿದೆ.ರೈತರಿಂದ ಖರೀದಿಸುವ ಹಾಲಿನ ದರ 1.75ರು ಕಡಿತ – ಮನ್ ಮುಲ್

ಜುಲೈ 18ರ ನಂತರ ವಿರೋಧ ಪಕ್ಷ ನಾಯಕ:

ಬಹುತೇಕವಾಗಿ ಜುಲೈ 18ರ ನಂತರ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ ಎಂದರು.

Share This Article
Leave a comment