ಬೆಂಗಳೂರಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ – ದಿಕ್ಕಾಪಾಲಾಗಿ ಓಡಿದ ಮಕ್ಕಳು, ಸಿಬ್ಬಂದಿಗಳು

Team Newsnap
1 Min Read

ನಗರದ ಪ್ರಮುಖ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ . ಇದರಿಂದಾಗಿ ಮಕ್ಕಳು ಹಾಗೂ ಸಿಬ್ಬಂದಿಗಳು ದಿಕ್ಕಾಪಾಲಾಗಿ ಓಡಿದ್ದಾರೆ.

ಬಾಂಬ್ ಬೆದರಿಕೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಬೆಂಗಳೂರು ನಗರ ಪೋಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿ ಬಾಂಬ್ ಬೆದರಿಕೆ ಬಂದ ಶಾಲೆಗಳಿಗೆ ಈಗಾಗಲೇ ಪೋಲಿಸರು ತೆರಳಿ ಪರಶೀಲನೆ ನಡೆಸುತ್ತಿದ್ದಾರೆ ಎಂದರು.

ಬೆಂಗಳೂರಿನ ಹೊರ ವಲಯದ ಶಾಲೆಗಳಿಗೆ ನೇರವಾಗಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ ಪಂತ್ ಹೇಳಿದ್ದಾರೆ.

ಹೆಣ್ಣೂರು ಬಳಿ ಇರುವ ವಿನ್ಸೆಂಟ್ ಪೆಲ್ಲೊಟಿ ಹಾಗೂ ಹುಸ್ಕೂರು ಬಳಿ ಇರುವ ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್ ಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ಈ ಎರಡೂ ಶಾಲೆಗಳ ಮಕ್ಕಳಿಗೆ ಹಾಗೂ ಪೋಷಕರಿಗೆ ಆತಂಕ ಮನೆ ಮಾಡಿದೆ . ಈ ಶಾಲೆಗಳಲ್ಲಿ ಬಾಂಬ್ ನಿಷ್ಕ್ರೀಯ ತಂಡ ಹಾಗೂ ಶ್ವಾನ ದಳಗಳು ಪತ್ತೆ ಕಾರ್ಯ ಮಾಡುತ್ತಿವೆ.

Share This Article
Leave a comment