ಮಂಡ್ಯದ ರಂಗನತಿಟ್ಟಿನಲ್ಲಿ ಬೋಟಿಂಗ್ ರದ್ದು

Team Newsnap
1 Min Read
Boating canceled at Ranganatittu in Mandya ಮಂಡ್ಯದ ರಂಗನತಿಟ್ಟಿನಲ್ಲಿ ಬೋಟಿಂಗ್ ರದ್ದು #Thenewsnap #Latestnews #Srirangapatna #Rangantittu #Bird_sanctuary #Mandya #Mysuru #Heritage_city #Bengaluru #Tourist #Mysuru #India #NEWS #Tourist_Spot

ರಾಜ್ಯದ ವಿವಿಧೆಡೆ ಈಗಾಗಲೇ ಮಳೆ ಅವಾಂತರ ಸೃಷ್ಟಿಸಿ, ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.

WhatsApp Image 2022 07 10 at 11.28.08 AM 1

ಈ ಹಿನ್ನೆಲೆ ಡ್ಯಾಂನಿಂದ 11,633 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯ ಅಂಚಿಗೆ ಬಂದಿವೆ.ಇದನ್ನು ಓದಿ –ಸಚಿವ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ

ರಂಗನತಿಟ್ಟು ಬೋಟಿಂಗ್ ಏಕೆ ರದ್ದು?

WhatsApp Image 2022 07 10 at 11.26.11 AM 1

ನಡುಗಡ್ಡೆಗಳು ಮುಳುಗಡೆಯ ಅಂಚಿಗೆ ಬಂದಿರುವ ಕಾರಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರದಿಂದ ಪ್ರವಾಸಿಗರಿಗೆ ಬೋಟಿಂಗ್ ನ್ನು ರದ್ದು ಮಾಡಲಾಗಿದೆ. ಜ್ಯೋತಿಷ್ಯ ಹೇಳುವ ನೆಪದಲ್ಲಿ ಜ್ಯೋತಿಷಿ ಮನೆಗೆ ನುಗ್ಗಿದ ಕಳ್ಳರು : 5 ಲಕ್ಷ ರು, 400 ಗ್ರಾಂ ಚಿನ್ನ ದೋಚಿ ಪರಾರಿ

ಕಳೆದ 2 ವರ್ಷಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದ ಪರಿಣಾಮ ರಂಗನತಿಟ್ಟು ಪಕ್ಷಿಧಾಮದ ಬಹುತೇಕ ನಡುಗಡ್ಡೆಗಳು ನಾಶವಾಗಿದ್ದವು.

ಇದರಿಂದ ಅಲ್ಲಿದ್ದ ಪಕ್ಷಿ ಸಂಕುಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದವು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ, ಕೆಆರ್‌ಎಸ್ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಇದರಿಂದ ರಂಗನತಿಟ್ಟು ಮುಳುಗಡೆಯಾಗುವ ಸಾಧ್ಯತೆ ಇದೆ.

Share This Article
Leave a comment