ಸಚಿವ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ

Team Newsnap
2 Min Read
Threatening call to IAS officer using Minister Gopaliah's name: Accused arrested ಸಚಿವ ಗೋಪಾಲಯ್ಯ ಹೆಸರು ಬಳಸಿ ಐಎಎಸ್‌ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ #Thenewsnap #IAS #Officer #Latestnews #Kannadanews #Bengaluru #Mandyanews #Mysuru #treatening #India #NEWS

ಸಚಿವರ ಪಿಎ ಎಂದು ಹಿರಿಯ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಗಂಗಾಧರ್ ಎಂಬುವವರನ್ನು ಬಂಧಿಸಲಾಗಿದೆ.

ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಕರೆ ಮಾಡಿ ಗಂಗಾಧರ್ ಬೆದರಿಕೆ ಹಾಕಿದ್ದ.ಇದನ್ನು ಓದಿ –ಜ್ಯೋತಿಷ್ಯ ಹೇಳುವ ನೆಪದಲ್ಲಿ ಜ್ಯೋತಿಷಿ ಮನೆಗೆ ನುಗ್ಗಿದ ಕಳ್ಳರು : 5 ಲಕ್ಷ ರು, 400 ಗ್ರಾಂ ಚಿನ್ನ ದೋಚಿ ಪರಾರಿ

ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ಕಾರು ಚಾಲಕನ ವರ್ಗಾವಣೆ ಸಂಬಂಧ ಕರೆ ಮಾಡಿ ಬೆದರಿಕೆ ಹಾಕಿದಾಗಿ ಪೊಲೀಸರು ತಿಳಿಸಿದ್ದಾರೆ.

WhatsApp Image 2022 07 10 at 11.19.48 AM

ಜುಲೈ 1 ರಂದು ರಾತ್ರಿ 11 ಗಂಟೆಗೆ ಮುನೀಶ್ ಮೌದ್ಗಿಲ್‌ಗೆ ಕರೆ ಮಾಡಿದ್ದ ವ್ಯಕ್ತಿ. ಕಾರು ಚಾಲಕ ಆನಂದ್ ವರ್ಗಾವಣೆ ಮಾಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದ . ಈ ವೇಳೆ ತಾನೂ ಅಬಕಾರಿ ಸಚಿವ ಗೋಪಾಲಯ್ಯನವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾನೆ. ಚಾಲಕ ಆನಂದನನ್ನು ಏಕೆ ವರ್ಗಾವಣೆ ಮಾಡಿದ್ದೀಯಾ ಎಂದು ಜೋರು ಅವಾಜ್ ಹಾಕಿದ್ದಾನೆ.

ಈ ವೇಳೆ ಇದು ಆಡಳಿತಾತ್ಮಕ ವಿಷಯ, ಇದಕ್ಕೆ ಈ ಹೊತ್ತಿನಲ್ಲಿ ಕರೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದ ಮುನೀಶ್ ಮೌದ್ಗಿಲ್ ಈ ವೇಳೆ ಏರು ಧ್ವನಿಯಲ್ಲಿ ಮಾತನಾಡಿದ್ದ.ಅಂಜನಿ ಪುತ್ರ ಆಂಜನೇಯನ ಶ್ರದ್ದಾ ಭಕ್ತಿಯೇ ಪ್ರೇರಣಾ ಶಕ್ತಿ

ಮರು ದಿನ ಟ್ರೂ ಕಾಲರ್‌ನಲ್ಲಿ ಪೋನ್ ನಂಬರ್ ಪರಿಶೀಲನೆ ನಡೆಸಿದ ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ರಾತ್ರಿ ಹೇಳಿದ್ದ ಹೆಸರು ಮತ್ತೆ ಟ್ರೂ ಕಾಲರ್ ಹೆಸರು ಬೇರೆ ಬೇರೆ ತೋರಿಸಿದೆ. ಟ್ರೂ ಕಾಲರ್ ನಲ್ಲಿ ಗೋವಿಂದರಾಜು ಟಿ ಎಂದು ಹೆಸರು ಪತ್ತೆಯಾಗಿದೆ. ಬಳಿಕ ಅಬಕಾರಿ ಸಚಿವರ ಪಿಎ ರಾಮೇಗೌಡ ಅವರಿಗೆ ವಿಷಯ ತಿಳಿಸಿದ ಮುನೀಶ್ ಮೌದ್ಗಿಲ್ ಅವರಿಂದ ಮಾಹಿತಿಯನ್ನು ಪಡೆದಿದ್ದಾರೆ. ರಾಮೇಗೌಡ ಈ ವೇಳೆ ಸಚಿವರ ಪಿಎ ಎಂದು ಯಾರೋ ಕರೆ ಮಾಡಿದ್ದಾರೆ ಆ ವ್ಯಕ್ತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ತನಗೆ ತಡರಾತ್ರಿ ಕರೆಯನ್ನು ಮಾಡಿ ಬೆದರಿಕೆಯನ್ನು ಹಾಕಿದ್ದು ಗೋಪಾಲಯ್ಯರವರ ಪಿಎ ಅಲ್ಲ ಅನ್ನೋದು ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನೀಶ್ ಮೌದ್ಗಿಲ್ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ಸಂಪಿಗೆ ಹಳ್ಳಿ ಪೊಲೀಸರು ಆರೋಪಿ ಗೋವಿಂದರಾಜುನನ್ನು ಬಂಧಿಸಿದ್ದಾರೆ.

Share This Article
Leave a comment