ಚಿತ್ತದ ಸುತ್ತ ಸುಳಿಯುತ್ತಿರುವ ಸಣ್ಣ
ಚಿಟ್ಟೆಯನ್ನ ನಿರ್ಲಕ್ಷಿಸಿ. ಪಾಪ ಎಂದು
ಮೈ-ಮರೆತೊಡೆ. ಸಣ್ಣ-ಕೀಟವೇ
ಸೊಳ್ಳೆಯಾಗಿ ಮನುಜನ ಬೆವರವಾಸನೆ
ಗ್ರಹಿಸಿ ಕಣ್ಣಿಗೆ ಕಾಣಿಸದಂತೆ..
ನೋವು ಅರಿವಿಗೆ ಬಾರದಂತೆ..
ನೆತ್ತರು ಹೀರವ ಕೀಟ..
ಗೂಡು-ಕಟ್ಟುವ ಗೋಜಿಗವಿಲ್ಲ
ಗಿಡ-ಮರಗಳಡೆಲೆವ ಪರಿಪಾಟಲಿಲ್ಲ.
ಸಂದಿ-ಗೊಂದಿಗಳಲಿ..
ತಗ್ಗು ಕೊಳಚೆಗಳಲಿ..
ನಿಂತ ತಿಳಿನೀರ ಕುಣಿಗಳಲಿ. ನೀರ
ಮೇಲಣ. ನೀರೊಳ. ಗಾಳಿಯೊಳ
ನಾಲಕ್ಕು ಹಂತದ ಜೀವನ ಚಕ್ರದಿ
ಸಂತಾನೋತ್ಪತ್ತಿಯ ಉತ್ತಾನ..
ತಿಳಿನೀರ ಮೇಲಣ ಬೆಳ್ಳಿ ಮೊಟ್ಟೆಗಳ
ಖಣಜ ಸ್ಕಲಿಸಿ ಕಪ್ಪಾಗಿ ದಿನ ಕಳೆಯಲು
ಮಿಟುಕು ಹುಳವಾಗಿ ಸಣ್ಣ ರೆಕ್ಕೆಗಳ
ಕೀಟವಾಗಿ ರೆಕ್ಕೆಗಳುದುರಿ ನೆತ್ತರು
ಹೀರುವ ಪರವಾಲಂಬಿ ರಕ್ತ-ಭಕ್ಷಾಸುರ.
ಸೊಳ್ಳೆಗಳ ನಿಗ್ರಹಿಸಲು ಹೊಗೆಯ
ಬುಗ್ಗೆಗೆ ಮೊರೆ-ಹೋಗುವ ಮನುಜ
ಕಾರ್ಬನ್ ಯುಕ್ತ ಹೊಗೆಯ ನಿಗ್ರಾಣಿಸಿ
ಶ್ವಾಸಕೋಶ ಸಂಬಂಧಿತ ದುಗುಡವ
ಭರಿಸುವ ಮನುಜ..
….✍️ ಸುರೇಶ ಫ ಮಲ್ಲಾಡದ..
ರಟ್ಟೀಹಳ್ಳಿ/ಸರ್ವಜ್ಞನ-ಮಾಸೂರು.
ಹಾವೇರಿ..
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)
ಕರುನಾಡ ಜಿಲ್ಲೆಗಳ ಕಿರು ಪರಿಚಯ – 25- ಕೊಡಗು