ಕೆಲವು ರಾಜ್ಯಗಳಲ್ಲಿ ಈಗ ಬ್ಲಾಕ್ ಫಂಗಸ್ ಸಾಂಕ್ರಾಮಿಕ ರೋಗ :ಈ ರೋಗ ಲಕ್ಷಣದ ಬಗ್ಗೆ ಮಾಹಿತಿ

Team Newsnap
1 Min Read

ಬ್ಲಾಕ್ ಫಂಗಸ್ ತುಂಬಾ ಡೇಂಜರ್. ಕೊರೋನಾ ಗಿಂತ ಭೀಕರವಾಗಿ ವ್ಯಾಪಿಸಿದೆ.‌ ರಾಜಸ್ಥಾನದಲ್ಲಿ ಈ ಸೋಂಕನ್ನು ಸಾಂಕ್ರಾಮಿಕ ಅಂತಾ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಇದು ಗಂಭೀರ ಕಾಯಿಲೆ ಎಂದು ಪರಿಗಣಿಸಲಾಗಿದೆ.

ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ರಾಜ್ಯಗಳು ಅಕ್ಷರಶಃ ಬ್ಲಾಕ್ ಫಂಗಸ್ ನಿಂದ ತತ್ತರಿಸಿ ಹೋಗುತ್ತಿವೆ. ಕರ್ನಾಟಕವೂ ಹೊರತಲ್ಲ.

ಈ ಸೋಂಕಿನ ಲಕ್ಷಣಗಳೇನು? ಅನ್ನೋದರ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕು. ಜೊತೆಗೆ ಯಾವೆಲ್ಲ ರಾಜ್ಯಗಳಲ್ಲಿ ಏನೇನಾಗ್ತಿದೆ. ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ? ಅನ್ನೋ ಪ್ರಶ್ನೆಗಳು ಸಹಜ.

ಬ್ಲಾಕ್ ಫಂಗಸ್ ರೋಗ ಲಕ್ಷಣ ಗಳೇನು?

  • ಪ್ರಾರಂಭದಲ್ಲಿ ಈ ಕಾಯಿಲೆ ಲಕ್ಷಣಗಳು ಅತ್ಯಂತ ಸಿಂಪಲ್ ಆಗಿರುತ್ತವೆ. ನಂತರ ಅತ್ಯಂತ ಗಂಭೀರವಾಗುತ್ತೆ.
  • ಮಾಮೂಲಿ ನೆಗಡಿ, ಕಾಫ್ ಬಂದಿರಬಹುದು ಅಂತ ನೆಗ್ಲೆಕ್ಟ್ ಮಾಡುವಂತೆಯೇ ಇಲ್ಲ.ಏಕೆಂದರೆ ಸಣ್ಣದಾಗಿ ರೋಗಲಕ್ಷಣ ಆರಂಭವಾಗಿ  ಜೀವವನ್ನೇ ಬಲಿ ತೆಗೆದುಕೊಳ್ಳೋ ಸಾಧ್ಯತೆ ಇದೆ.
  • ಕಣ್ಣುಗಳನ್ನೇ ಕಳೆದು ಕೊಳ್ಳುವಂತೆಯೂ ಇದು ಮಾಡಬಲ್ಲದು.
  • ಬ್ಲಾಕ್ ಫಂಗಸ್ ಬಂದಾಗ ಕಿವಿ, ಮೂಗು ಹಾಗೂ ಗಂಟಲಿಗೆ ಮೊದಲು ಅಟ್ಯಾಕ್ ಮಾಡುತ್ತದೆ.
  • ಉಸಿರಾಡಿದಾಗ ಕೆಟ್ಟ ವಾಸನೆ ಬಂದಂತಾಗುವುದು, ಮೂಗಿನಿಂದ ಕಪ್ಪು ದ್ರವ ಸೋರುತ್ತದೆ.
  • ಉಗುಳಿದಾಗ ಕಪ್ಪು ಡಾಟ್ಸ್​ ಇರೋ ಕಫದಂತೆ ಬರುವ ಸಾಧ್ಯತೆ
  • ಕಿವಿಯ ಒಳಗೆ ತುರಿಕೆ, ಕಿವಿನೋವು, ಕಿವಿ ಕಟ್ಟಿದಂತಾಗುತ್ತೆ. ಕಿವಿ ಬ್ಲಾಕ್​ ಆದಂತೆ ಕೂಡ ಆಗುತ್ತೆ.
  • ಕಣ್ಣು ನೋವು, ಕಣ್ಣು ಉರಿ, ಹುಬ್ಬು ನೋವು, ಸೈನಸ್ ಪ್ರದೇಶದಲ್ಲಿ ನೋವು ಬಂದರೂ ಸಹ ಅಂತಹ ವ್ಯಕ್ತಿ ಕೂಡಲೇ ಎಚ್ಚರಿಕೆ ವಹಿಸಬೇಕು.
  • ಜೊತೆಗೆ ಗಂಟಲಿನಲ್ಲಿ ಸಣ್ಣ ಪ್ರಮಾಣದಿಂದ ತೀವ್ರತರನಾದ ಕಿರಿ ಕಿರಿ ಕೂಡ ಆಗಬಹುದು.
  • ಪ್ರಮುಖವಾಗಿ ಕಣ್ಣುಗಳು ಮಂಜಾಗುವುದು, ಒಂದೇ ವಸ್ತು ನೋಡಿದರೂ 2ರಂತೆ ಕಾಣುವುದು ಬ್ಲಾಕ್ ಫಂಗಸ್ ಅತಿರೇಕಕ್ಕೆ ಹೋಗ್ತಿರೋ ಮುನ್ಸೂಚನೆ ಆಗಿದೆ.
  • ಈ ಎಲ್ಲಾ ಲಕ್ಷಣ ಕಂಡುಬಂದ್ರೂ ಅಂತಹ ವ್ಯಕ್ತಿ ಕೂಡಲೇ ಕಿವಿ, ಮೂಗು ( ENT ) ತಜ್ಙ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ‌
Share This Article
Leave a comment