ಅಕ್ರಮವಾಗಿ ವ್ಯಾಕ್ಸಿನ್ ಮಾರಾಟ: ವೈದ್ಯೆ-ಶಿಷ್ಯೆ ವಿರುದ್ಧ ದೂರು ದಾಖಲು

Team Newsnap
1 Min Read

ನಗರದಲ್ಲಿ ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟ ಮಾಡಿ ದಾಖಲೆ ಸಮೇತ ಸಿಕ್ಕಿಬಿದ್ದ ವೈದ್ಯೆ ಹಾಗೂ ಆಕೆಯ ಶಿಷ್ಯೆಯ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರಿಂದ ಹಣ ಪಡೆದು ಲಸಿಕೆ ಮಾರುತ್ತಿದ್ದ ಆರೋಪದ ಮೇಲೆ ನಿನ್ನೆಯಷ್ಟೇ ವೈದ್ಯೆ ಪುಷ್ಪಿತಾ ಹಾಗೂ ಆಕೆಯ ಸ್ನೇಹಿತೆ ಪ್ರೇಮಲತಾಳನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಗಳ ಹೇಳಿಕೆ ಆಧಾರದ ಮೇಲೆ ಐಪಿಸಿ ಸೆಕ್ಷನ್ 403, 409, 380, 420 ರ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ.‌

ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಿತಾ, ಲಸಿಕೆಯನ್ನು ಕದ್ದು ಅನ್ನಪೂರ್ಣೇಶ್ವರಿ ನಗರದಲ್ಲಿರುವ ಪ್ರೇಮ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು.

ಈ ಪ್ರೇಮ ತಾನು ಕರೆಸಿದ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನೇಷನ್‌ ನೀಡಲಾಗುತ್ತಿತ್ತು. ಏ.23 ರಿಂದ ತಲಾ 500 ರೂಪಾಯಿ ಪಡೆದು ವ್ಯಾಕ್ಸಿನ್ ನೀಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಪಡೆಯುವ ನೆಪದಲ್ಲಿ ತೆರಳಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article
Leave a comment