ಬಿಜೆಪಿ ನಾಯಕರು ತಪ್ಪು ಮಾಡಿದರೆ ಜೈಲಿಗೆ : ಸಂಸದ ಸಿಂಹ

Team Newsnap
1 Min Read

ಮೈಸೂರು : ರಾಜ್ಯದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಪಿಎಸ್ಐ ಹಗರಣ, ಬಿಟ್ ಕಾಯಿನ್ , ಶೇ 40 ರಷ್ಟು ಕಮೀಷನ್ ವಿಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲಾ ಪ್ರಕರಣದ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ. ಕಾಂಗ್ರೆಸ್ ನವರು ಹೇಳಿದ್ದೇಲ್ಲ ಸತ್ಯ. ನೀವು ಸತ್ಯ ಸಂಧರು ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.

ನಮ್ಮ ಪಕ್ಷದಲ್ಲೇ ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನು ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನು ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ಗ್ಯಾರಂಟಿ ಯೋಜನೆಗಳ ವಿವರ : ಅನುಷ್ಠಾನಗಳ ಮಾರ್ಗ ಸೂಚಿ

ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರಾ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a comment