ಬೆಂಗಳೂರು :ಕರ್ನಾಟಕ ವಿಧಾನಸಭೆ ಚುನಾವಣೆ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಲೋಕಸಭೆ ಚುನಾವಣೆ ಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಭಾರೀ ಚರ್ಚೆಗಳು ಆರಂಭವಾಗಿವೆ.
ಲೋಕಸಭೆ ಚುನಾವಣೆಯಲ್ಲಿ ಮತಗಳ ಕ್ರೂಢೀಕರಣಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ.
ಈಗಾಗಲೇ ಈ ಬಗ್ಗೆ ಹಲವು ಮಾತುಕತೆಗಳೂ ಸಹ ನಡೆದಿದೆ ಮೈತ್ರಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆದಿದೆ. 20-22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದರೆ 6-8 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಸ್ಪರ್ಧೆಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತಂತೆ ಈಗಾಗಲೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದಾರೆ.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಕಳೆದ 3 ದಿನಗಳ ಹಿಂದೆ ಕುಮಾರಸ್ವಾಮಿ ಅವರು ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆ ಜೊತೆಗೆ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡುವ ಕುರಿತಂತೆಯೂ ಚರ್ಚೆ ನಡೆದಿದೆ.
- ಶೇ.6.50ರಷ್ಟು ‘ರೆಪೋ ದರ’ವನ್ನು ಯಥಾಸ್ಥಿತಿ ಮುಂದುವರೆಸಿದ ‘RBI’
- ಮಂಡ್ಯ ನಗರಕ್ಕೆ ನೀರು ಸರಬರಾಜು ದರ ಮಾಸಿಕ 225 ರು ನಿಗದಿ – ಜಿಲ್ಲಾ ಮಂತ್ರಿ ಸೂಚನೆ
- 4144 ಮೆಟ್ರಿಕ್ ಟನ್ ದಾಟಿದ ‘ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ
- ನಂದಿನಿ ಹಾಲಿನ ದರ ಏರಿಕೆ ?
- ಶೀಘ್ರದಲ್ಲೇ BMTCಗೆ 921 ಎಲೆಕ್ಟ್ರಿಕ್ ಬಸ್ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು ಅನುದಾನ ಬಿಡುಗಡೆ – ಸಿಎಂ